ಡೆಲ್ಟಾ ಪ್ಲಸ್‌ ಕೊರೊನಾ ವೈರಸ್‌: ಮಹಾರಾಷ್ಟ್ರದಿಂದ ಉತ್ತರ ಕನ್ನಡಕ್ಕೆ ಬರುವವರ ಕೈಗೆ ಸೀಲ್..!

ಕಾರವಾರ: ಎರಡನೇ ಅಲೆ ಮುಗಿಯುವ ಹಂತದಲ್ಲಿ ಇದೀಗ ಕೊರೊನಾ ಡೆಲ್ಟಾ ವೈರಸ್ ಬಗ್ಗೆ ಭೀತಿ ಪ್ರಾರಂಭವಾಗಿದ್ದು, ಉತ್ತರಕನ್ನಡದ ಜಿಲ್ಲಾಡಳಿತ ಈ ರೂಪಾಂತರಿ ವೈರಸ್ ತಡೆಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಡೆಲ್ಟಾ ಪ್ಲಸ್‌ ವೈರಸ್ ಸೋಂಕಿನ ಮಾದರಿ ಪತ್ತೆಯಾಗಿಲ್ಲ. ಮಹಾರಾಷ್ಟ್ರದಲ್ಲಿ ಕಂಡು ಬಂದಿರುವುದು ತಿಳಿದಿದೆ. ಜಿಲ್ಲೆಯಲ್ಲಿ ರೈಲ್ವೆ ಸ್ಟೇಷನ್, ಹಾಗೂ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತಿದ್ದು, ಕೊರನಾ ವೈರಸ್‌ ಡೆಲ್ಟಾ ಪ್ಲಸ್ ರೂಪಾಂತರಿ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಬರುವವರ ಕೈಗೆ ಸೀಲ್‌ ಹಾಕಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ಹದಿನೈದು ದಿನಕೊಮ್ಮೆ ಸೋಂಕಿತರ ಗಂಟಲು ದ್ರವದ ಪರೀಕ್ಷೆಯನ್ನ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಲಸಿಕೆ ತೆಗೆದುಕೊಂಡ ನಂತರವೂ, ಕೊರೊನಾ ಸೋಂಕು ಧೃಡಪಟ್ಟಿದ್ದರೆ ಅವರಿಗೆ ಕೋವಿಡ್ ರೂಪಾಂತರ ವೈರಸ್ ಸೋಂಕು ಇದೆಯೇ, ಎರಡನೇ ಬಾರಿಗೆ ಸೋಂಕು ದೃಢಪಟ್ಟರೇ ಅವರಲ್ಲಿ ಬೇರೆ ವೈರಸ್ ಕಂಡು ಬಂದಿದೆಯೇ ಎಂದು ತಿಳಿದುಕೊಳ್ಳುವ ನಿಟ್ಟಿನಲ್ಲಿ ದ್ರವ ಪರೀಕ್ಷೆಯನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಅಂತರ ಜಿಲ್ಲೆ ಹಾಗೂ ಅಂತರ್‌ ರಾಜ್ಯ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ಆದರೆ ಜಿಲ್ಲಾಡಳಿತದಿಂದ ರೈಲ್ವೆ ನಿಲ್ದಾಣ ಹಾಗೂ ಚೆಕ್ ಪೋಸ್ಟ್ ನಲ್ಲಿ ನಿಗಾ ಇಡಲಾಗಿದ್ದು, ಮಹಾರಾಷ್ಟ್ರದಿಂದ ಬರುವವರಿಗೆ ಕೈಗೆ ಸೀಲ್ ಹಾಕುವ ಕ್ರಮಕ್ಕೆ ಸೂಚಿಸಲಾಗಿದೆ. ಅವರನ್ನು ಕ್ವಾರಂಟೈನ್ ಮಾಡಲು ಸಹ ಜಿಲ್ಲಾಡಳಿತಕ್ರಮ ಕೈಗೊಳ್ಳಲಿದೆ. ಸಾಧ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಕುಮಟಾ : ಅಘನಾಶಿನಿ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement