ಕನಿಷ್ಠ ಬೆಂಬಲ ಬೆಲೆ ಶಾಸನ ಬದ್ಧ ಬೆಲೆಯಾಗಿಸಲು ಶಿಫಾರಸು:ಕೃಷಿ ಬೆಲೆ ಆಯೋಗದ ಅಧ್ಯಕ್ಷ

ಹುಬ್ಬಳ್ಳಿ: ಕೃಷಿ ಉತ್ಪನಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನ ಬದ್ದ ಬೆಲೆಯಾಗಿಸುವಂತೆ ರೈತರು ಒತ್ತಾಯಿಸಯತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ಕೃಷಿ ಬೆಲೆ ಆಯೋಗದ ವಾರ್ಷಿಕ ವರದಿಯಲ್ಲಿ ಶಿಫಾರಸ್ಸು ಮಾಡಲಾಗುವುದು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಲಗುರ್ಕಿ ಹೇಳಿದ್ದಾರೆ.
ಸೋಮವಾರ ಹುಬ್ಬಳ್ಳಿಯ ಎಪಿಎಂಸಿ ಕಾರ್ಯಾಲಯದಲ್ಲಿ ಎಪಿಎಂಸಿ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರೈತರು ಉತ್ಪಾದಿಸುವ ಬೆಳೆಗಳಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಲೆಯನ್ನು ಘೋಷಿಸುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ನಿಗದಿ ಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಉತ್ಪನ್ನಗಳನ್ನುಕೊಳ್ಳುವುದನ್ನು ತಡೆಗಟ್ಟಬೇಕಿದೆ. ರೈತರು ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡುವಂತೆ ಪ್ರೇರೇಪಿಸಬೇಕು ಎಂದರು.
ಸದ್ಯ ಕೃಷಿ ಉತ್ಪನ್ನಗಳನ್ನು ರೈತರು ಮಾರುಕಟ್ಟೆ ಹೊರಗಡೆ ಮಾರಾಟ ಮಾಡುವುದರಿಂದ ಎಪಿಎಂಸಿಗಳಿಗೆ ಬರುವ ಆದಾಯ ಕುಂಠಿತವಾಗಿದೆ. ರಾಜ್ಯ ಸರ್ಕಾರ ಶೇ.1.50 ರಷ್ಟಿದ್ದ ಮಾರಾಟ ತೆರಿಗೆಯನ್ನು ಶೇ.0.60ಕ್ಕೆ ಇಳಿಸಿದೆ. ಆದಾಗ್ಯೂ ಎಪಿಎಂಸಿಗಳ ಆದಾಯ ಶೇ.75 ರಷ್ಟು ಕಡಿಮೆಯಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಎಪಿಎಂಸಿ ನಿರ್ವಹಣೆಗೆ ತೊಂದರೆಯಾಗಲಿದೆ. ಎಪಿಎಂಸಿಗಳ ಅಸ್ತಿತ್ವದ ಪ್ರಶ್ನೆ ಎದುರಾಗಿದೆ ಎಂದು ಹೇಳಿದರು.
ಎಪಿಎಂಸಿ ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ರೈತರಿಗೆ ಆಧಾರ ಬೆಲೆ, ಇ ಮಾರ್ಕೆಟಿಂಗ್ ಕೈಗೊಳ್ಳವ ಕುರಿತು ಮಾಹಿತಿ ನೀಡಲಾಗುವುದು. ಎಪಿಎಂಸಿಗಳ ಸುಧಾರಣೆ ಕುರಿತು ಕೃಷಿ ತಜ್ಞರು ಪರಿಣಿತರೊಂದಿಗೆ ವೆಬ್ ನಾರ್ ಆಯೋಜಿಸಿ ಸಲಹೆ ಪಡೆಯಲಾಗುವುದು ಎಂದರು.
ಹುಬ್ಬಳ್ಳಿ ಎಪಿಎಂಸಿ ಏಷ್ಯಾದ ಅತಿ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆಯಾಗಿದೆ. 434 ಎಕರೆ ವಿಸ್ತೀರ್ಣವಿದೆ. ಇದರಲ್ಲಿ ಕೃಷಿ ಮಾರುಕಟ್ಟೆ ಹಾಗೂ ರೈತರಿಗೆ ಸಹಾಯವಾಗುವ ನಿಟ್ಟಿಲ್ಲಿ ಸುಮಾರು 76 ಎಕರೆ ಜಮೀನು ಇತರರಿಗೆ ಮಂಜೂರು ಮಾಡಲಾಗಿದೆ. ಇವು ಸರಿಯಾಗಿ ಉಪಯೋಗವಾಗುತ್ತಿರುವ ಬಗ್ಗೆ ವರದಿ ನೀಡುವಂತೆ ಎಪಿಎಂಸಿ ಕಾರ್ಯದರ್ಶಿಗಳಿಗೆ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಸೂಚಿಸಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

13 ಕೋಟಿ ಬಾಕಿ ಹಣ ಪಾವತಿಗೆ ರೈತರರಿಂದ ಮನವಿ:
ಕಳೆದ ವರ್ಷ ಸರ್ಕಾರ ಬೆಂಬಲೆ ಬೆಲೆಯಲ್ಲಿ ಹಲವು ಧಾನ್ಯಗಳನ್ನು ಖರೀದಿಸಿದೆ. ಇವುಗಳ ಒಟ್ಟು ಬಾಕಿ ರಾಜ್ಯಾದ್ಯಂತ 13 ಕೋಟಿ ರೂ. ಇದೆ. ಇದನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವಂತೆ ರೈತ ಮುಖಂಡರು ಮನವಿ ಸಲ್ಲಿಸಿದರು. ಧಾರವಾಡ ಜಿಲ್ಲೆಯ ಇತರೆ ಎಪಿಎಂಸಿ ಸದಸ್ಯರ ಜೊತೆ ಹನುಮನಗೌಡ ಬೆಲಗುರ್ಕಿ ಚರ್ಚಿಸಿದರು. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮುಂಗಾರು ಹಂಗಾಮಿನ ಬಿತ್ತನೆ ವಿವರಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರಾದ ಸುರೇಶ್ ಕಿರೆಸೂರ, ರಾಯ್ಕರ್ ಬಸವರಾಜ, ಪ್ರಗತಿ ಪರ ರೈತರಾದ ಕೇಶವ್ ಯಾದವ್ ,ಎಪಿಎಂಸಿ ಕಾರ್ಯದರ್ಶಿ ಡಾ.ಕೆ.ಕೋಡಿಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್, ಎಪಿಎಂಸಿ ಉಪನಿರ್ದೇಶಕ‌ ಪ್ರಭಾಕರ ಅಂಗಡಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ, ಆಹಾರ ಇಲಾಖೆ ಉಪನಿರ್ದೇಶಕಿ ಪ್ರೀತಿ ಚಂದ್ರಶೇಕರ ದೊಡ್ಡಮನಿ ಮೊದಲಾದವರಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement