ಕಾಸರಗೋಡು ಜಿಲ್ಲೆಯ ಹಳ್ಳಿಗಳ ಹೆಸರನ್ನು ಕನ್ನಡದ ಹೆಸರಿನಿಂದ ಮಲಯಾಳಂನಲ್ಲಿ ಹೊಸ ಹೆಸರುಗಳಿಗೆ ಬದಲಾಯಿಸಲು ಕೇರಳ ಸರ್ಕಾರ ಯೋಜಿಸುತ್ತಿದೆ ಎಂಬ ಹೇಳಿಕೆಯನ್ನು ಕಾಸರ್ಗೋಡ್ ಜಿಲ್ಲಾಧಿಕಾರಿ ಸಜಿತ್ ಬಾಬು ಕಚೇರಿ ಮತ್ತು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನಿರಾಕರಿಸಿದ್ದಾರೆ.
ಕರ್ನಾಟಕದರಾಜಕಾರಣಿಗಳು ಕಾಸರಗೋಡು ಜಿಲ್ಲೆಯ ಹಳ್ಳಿಗಳ ಹೆಸರನ್ನು ಅದರ ಕನ್ನಡ ಹೆಸರಿನಿಂದ ಮಲಯಾಳಂನಲ್ಲಿ ಹೊಸ ಹೆಸರುಗಳಿಗೆ ಬದಲಾಯಿಸುವುದನ್ನು ವಿರೋಧಿಸಿದ ನಂತರ ಈ ನಿರಾಕರಣೆ ಬಂದಿದೆ. ಅಂತಹ ಯಾವುದೇ ಯೋಜನೆ ಜಾರಿಯಲ್ಲಿಲ್ಲ ಎಂದು ಕೇರಳ ಹೇಳಿದೆ ಎಂದು ದಿ ನ್ಯೂಸ್ಮಿನಟ್.ಕಾಮ್ ವರದಿ ಮಾಡಿದೆ.
ಕೇರಳ ಸರ್ಕಾರದ ಕಡೆಯಿಂದ ಅಂತಹ ಯಾವುದೇ ಕ್ರಮವಿಲ್ಲ. ನಾನು ಕಲೆಕ್ಟರ್ ಮತ್ತು ತಹಶೀಲ್ದಾರ್ ಅವರನ್ನು ಸಂಪರ್ಕಿಸಿದೆ, ಮತ್ತು ಅವರು ಕೂಡ ಈ ಬಗ್ಗೆ ಕೇಳಿಲ್ಲ” ಎಂದು ಶಾಸಕ ಅಶ್ರಫ್ ತಿಳಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಹೇಳಿದೆ.
ನಾವು ಮಲಯಾಳಿಗಳು ಮಂಗಳೂರಿಗೆ ಮಂಗಳಾಪುರ ಎಂದು ಹೇಳುತ್ತೇವೆ, ಅದೇ ರೀತಿಯಲ್ಲಿ ಮಲಯಾಳಿಗಳು ಕೆಲವು ಹೆಸರುಗಳನ್ನು ತಮ್ಮದೇ ಉಚ್ಚಾರಣೆಯಲ್ಲಿ ವಿಭಿನ್ನವಾಗಿ ಉಚ್ಚರಿಸುತ್ತಾರೆ. ಇದು ಯಾವಾಗಲೂ ಹಾಗೆ ಮತ್ತು ಯಾವುದೇ ಅಧಿಕೃತ ಹೆಸರನ್ನು ಬದಲಾಯಿಸುವುದು ಇಲ್ಲಿ ನಡೆಯುತ್ತಿಲ್ಲ. ನಾವು ಇದನ್ನು ಮಾಡುತ್ತಿಲ್ಲ. ಎಂದು ಅಶ್ರಫ್ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ