ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಯುರೋಪಿಯನ್ ಯೂನಿಯನ್‌ಗೆ ಪ್ರವೇಶವಿಲ್ಲ..!

ನವದೆಹಲಿ: ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದ ಕೊವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರು ಯುರೋಪಿಯನ್ ಯೂನಿಯನ್ ‘ಗ್ರೀನ್ ಪಾಸ್’ ಗೆ ಅರ್ಹರಲ್ಲ.
ಜುಲೈ 1 ರಿಂದ ಎಸ್‌ಐಐ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಯುರೋಪಿಯನ್ ಯೂನಿಯನ್‌ಗೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಬ್ರಿಟನ್ನಿನಲ್ಲಿ ಉತ್ಪಾದನೆಯಾಗುವ ಆಕ್ಸ್‌ಫರ್ಡ್ ವಿವಿಯ ಅಸ್ಟ್ರಾ ಜೆನಿಕಾ ಲಸಿಕೆಗೆ ಯೂರೋಪಿಯನ್ ಯೂನಿಯನ್ ಒಪ್ಪಿಗೆ ನೀಡಿದೆ. ಆದರೆ ಭಾರತದಲ್ಲಿ ಉತ್ಪಾದನೆಯಾಗುವ ಕೊವಿಶೀಲ್ಡ್ ಹೆಸರಿನ ಅದೇ ಲಸಿಕೆಗೆ ಯುರೋಪ್ ಮೆಡಿಸಿನ್ ಏಜೆನ್ಸಿ ಇನ್ನೂ ಅನುಮೋದನೆ ನೀಡಿಲ್ಲ. ಆಮೆರಿಕಾದ ಫೈಜರ್, ಮಾಡೆರ್ನಾ ಲಸಿಕೆಗಳಿಗೆ ಯೂರೋಪ್ ಮೆಡಿಸಿನ್ ಏಜೆನ್ಸಿ ಒಪ್ಪಿಗೆ ನೀಡಿದೆ. ಆದರೆ ಆಕ್ಸ್‌ಫರ್ಡ್ ವಿವಿ ಸಂಶೋಧನೆಯ ಲಸಿಕೆ ಉತ್ಪಾದನೆಯಾಗುವ ಲಸಿಕೆಗೆ ಮನ್ನಣೆ ಇಲ್ಲ. ಒಪ್ಪಿಗೆ ಪಡೆಯುವಂತೆ ಯೂರೋಪ್ ಮೆಡಿಸಿನ್ ಏಜೆನ್ಸಿ, ಸೆರಮ್‌ಗೆ ಸೂಚನೆ ನೀಡಿದೆ.
ಕೊವಿಶೀಲ್ಡ್ ಲಸಿಕೆಗೆ ಯೂರೋಪ್ ಮೆಡಿಸಿನ್ ಏಜೆನ್ಸಿಯ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರದಿಂದ ಪುಣೆಯ ಎಸ್‌ಐಐಗೆ ಸೂಚನೆ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಪಡೆದ ಲಸಿಕೆಗಳಿಗೆ ಗ್ರೀನ್ ಪಾಸ್ ನೀಡುವಂತೆ ಭಾರತ ಒತ್ತಾಯಿಸಿದೆ. ಕೊವಿಶೀಲ್ಡ್ ಲಸಿಕೆಗೆ ಡಬ್ಲ್ಯುಎಚ್‌ಒ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಆದರೆ ಯುರೋಪಿಯನ್ ಯೂನಿಯನ್ ಒಪ್ಪಿಗೆ ನೀಡಿಲ್ಲ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲಾ ಹೇಳಿಕೆ ನೀಡಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement