ದನದ ಮಾಂಸ ಸಾಗಾಟ: ಒಬ್ಬನ ಬಂಧನ

ಕುಮಟಾ; ಅನಧಿಕೃತವಾಗಿ ದನದ ಮಾಂಸ ಸಾಗಿಸುತ್ತಿದ್ದ ಲಾರಿ ಮತ್ತು ವ್ಯಕ್ತಿಯೊಬ್ಬನನ್ನು ಕುಮಟಾ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಆಧಾರದಲ್ಲಿ ತಾಲೂಕಿನ ಹೊಳೆಗದ್ದೆಯ ರಾಷ್ಟ್ರೀಯ ಹೆದ್ದಾರಿ ೬೬ ರ ಟೋಲ್ ನಾಕಾ ಹತ್ತಿರ ಅಪರಾಧ ವಿಭಾಗದ ಪಿಎಸ್‌ಐ ಗಿರಿರಡ್ಡಿ ನೇತೃತ್ವದ ತಂಡವು ಲಾರಿಯೊಂದನ್ನು ತಡೆದು ತನಿಖೆ ನಡೆಸಿದಾಗ ಮಾಂಸ ಸಗಾಟದ ಜಾಲ ಪತ್ತೆಯಾಗಿದೆ.
ಲಾರಿಯಲ್ಲಿ ಸುಮಾರು ೪ ಲಕ್ಷ ರೂ.ಗಳ ಅಂದಾಜಿನ ೩ ಟನ್ ದನದ ಮಾಂಸ ಪತ್ತೆಯಾಗಿದೆ.

ಮೀನು ಸಾಗಾಣಿಕೆಯ ಕಂಟೇನರ್ ನಲ್ಲಿ ಐಸ್ ಗಳನ್ನೂ ಇಟ್ಟು ಜೊತೆಗೆ ಗೋ ಮಾಂಸ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.  ಈ ಕುರಿತು ಕಂಟೇನರ್ ಚಾಲಕ ಚಾಲಕ ಮಹಮದ್ ಶಾಹಿದ್ ಎಂಬಾತನನ್ನು ಬಂಧಿಸಿ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಮಟಾ ಪಿಎಸ್ಐ ಆನಂದಮೂರ್ತಿ ತನಿಖೆ ನಡೆಸಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement