ಅತ್ಯಾಚಾರಿಗಳಿಂದ ಮಹಿಳೆಯನ್ನು ರಕ್ಷಿಸಿದ ಎಮ್ಮೆ!

ಹಾವೇರಿ: ದನ ಮೇಯಿಸಲು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರನ್ನು ಎಮ್ಮೆ ಅಟ್ಟಾಡಿಸಿಕೊಂಡು ಹೋಗುವ ಮೂಲಕ ಮಹಿಳೆಯನ್ನು ರಕ್ಷಿಸಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಿರೇಮರಳಿಹಳ್ಳಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಆರೋಪಿಗಳನ್ನು ಹಿರೇಮರಳಿಹಳ್ಳಿ ಗ್ರಾಮದ ಇಬ್ಬರು ಆರೋಪಿಗಳು ಹಿರೇಮರಳಿಹಳ್ಳಿ ಗ್ರಾಮದ ತಮ್ಮ ಜಮೀನಿನ ಬದುವಿನ ಹತ್ತಿರವಿರುವ ನೀಲಗಿರಿ ತೋಪಿನಲ್ಲಿ ದನ ಮೇಯಿಸುತ್ತಿದ್ದ ಮಹಿಳೆ ಜೊತೆ ಒಬ್ಬಾತ ಅಸಭ್ಯವಾಗಿ ವರ್ತಿಸಿದ್ದಾನೆ.
ಈತನಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಮಹಿಳೆಗೆ ಇನ್ನೋರ್ವ ಆರೋಪಿ ಎದುರಿನಿಂದ ಬಂದು ಹಲ್ಲೆ ನಡೆಸಿದ್ದಾನೆ. ಅಲ್ಲದೆ ಪ್ರತಿರೋಧ ಒಡ್ಡಿದ ಮಹಿಳೆಯ ಕತ್ತನ್ನು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಮಹಿಳೆ ಚೀರಾಡುತ್ತಿರುವುದನ್ನು ಗಮನಿಸಿದ ಎಮ್ಮೆ ತನ್ನ ಒಡತಿ ಅಪಾಯದಲ್ಲಿದ್ದಾಳೆಂದು ಭಾವಿಸಿ ತಕ್ಷಣವೇ ನೆರವಿಗೆ ಧಾವಿಸಿದೆ. ಆರೋಪಿಯಲ್ಲೊಬ್ಬನನ್ನು ಅಟ್ಟಾಡಿಸಿಕೊಂಡು ಹೋಗಿದೆ.ಆತ ಓಡಿಹೋಗಿದ್ದಾನೆ ಎಂದು ಹೇಳಲಾಗಿದೆ.
ಮಹಿಳೆ ಇನ್ನೋರ್ವನಿಂದ ತಪ್ಪಿಸಿಕೊಂಡು ಓಡಿಹೋಗುವ ಸಂದರ್ಭದಲ್ಲಿ ಎಮ್ಮೆ ಅವನನ್ನೂ ಬೆನ್ನಟ್ಟಿ ಹೋಗಿದೆ. ಪ್ರಾಣಾಪಾಯದಿಂದ ಪಾರಾಗಿ ಬಂದ ಮಹಿಳೆ ಹಿರೇಮರಳಿಹಳ್ಳಿ ಗ್ರಾಮಸ್ಥರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಬ್ಬ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement