ಜುಲೈ 19ರಿಂದ ಆಗಸ್ಟ್‌ 13ರ ವರೆಗೆ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಶಿಫಾರಸು

ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನ ಈ ವರ್ಷ ಜುಲೈ 19 ರಿಂದ ಆಗಸ್ಟ್ 13 ರವರೆಗೆ ನಡೆಸಬೇಕೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಶಿಫಾರಸು ಮಾಡಿದೆ.
ದಿನಾಂಕಗಳ ಬಗ್ಗೆ ಚರ್ಚಿಸಲು ಸಿಸಿಪಿಎ ಕಳೆದ ವಾರ ಸಭೆ ಸೇರಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯ ಅಂತಿಮ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಅಧಿವೇಶನದಲ್ಲಿ ಕೆಲವು ಸುಗ್ರೀವಾಜ್ಞೆಗಳನ್ನು ಅಂಗೀಕರಿಸುವುದು ಸೇರಿದಂತೆ ಹಲವಾರು ಮಸೂದೆಗಳನ್ನು ಸರ್ಕಾರ ಜಾರಿಗೆ ತರುವ ಸಾಧ್ಯತೆಯಿದೆ. ಒಟ್ಟು 20 ದಿನ ಅಧಿವೇಶನ ನಡೆಯಲು ಶಿಫಾರಸು ಮಾಡಿದೆ. ಈ ಸಂದರ್ಭದಲ್ಲಿ ಕೋವಿಡ್‌ ನಿರ್ವಹಣೆ, ಲಸಿಕೆ ಕೊರತೆ, ಆಮ್ಲಜನಕ ಕೊರತೆ ವಿಚಾರವನ್ನು ವಿಪಕ್ಷಗಳು ಚರ್ಚೆಗೆ ತರುವ ಸಾಧ್ಯತೆ ಇದೆ. ಹಾಗೆಯೇ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯ ಮಾಡಲಿದೆ.
ಭಾರತವು ಕೋವಿಡ್ -19 ರ ಎರಡನೇ ಅಲೆಯನ್ನು ಎದುರಿಸುವ ಬಗ್ಗೆ ಕಳೆದ ಬಜೆಟ್ ಅಧಿವೇಶನದವರೆಗೆ ಸಂಸತ್ತಿನಲ್ಲಿ ಸಾಕ್ಷಿಯಾಗಿದ್ದ, ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳು ಮುಂದುವರಿಯುವ ಸಾಧ್ಯತೆಯಿದೆ.
ಅಧಿವೇಶನವು ಕೆಳ ಮನೆ, ಮೇಲ್ಪನೆಯಲ್ಲಿ ಏಕಕಾಲಕ್ಕೆ ನಡೆಯಬಹುದೇ? ತಲಾ ನಾಲ್ಕು ಗಂಟೆಗಳ ಕಾಲ ಅಧಿವೇಶನ ನಡೆಯಬಹುದೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement