ಬೆವರಿನ ಮೂಲಕವೂ ಕೂಡ ದೇಹದ ಸಕ್ಕರೆ ಮಟ್ಟ ಪರೀಕ್ಷೆ ಮಾಡಬಹುದಂತೆ..!

ಚೆನ್ನೈ: ಇಲ್ಲಿನ ಅಣ್ಣಾ ವಿವಿಯ ಪಿಎಚ್‌ಡಿ ಪದವೀಧರೆ ಪ್ರೀತಿ ರಾಮ್‌ದಾಸ್ ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟವನ್ನು ಬೆವರಿನ ಮೂಲಕ ಪತ್ತೆಹಚ್ಚಲು ಜೈವಿಕ ವಿಘಟನೆಯ ಉಪಕರಣವೊಂದನ್ನು ಕಂಡುಹಿಡಿದಿದ್ದಾರೆ.
ವಿಶ್ವದಲ್ಲಿ ಸುಮಾರು 7.7 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಮಧುಮೇಹಿಗಳು ಎದ್ದಕೂಡಲೇ ಗ್ಲುಕೋಮೀಟರ್ ಮೂಲಕ ತಮ್ಮ ರಕ್ತದ ಸಕ್ಕರೆ ಮಟ್ಟ ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಬೆರಳ ತುದಿಯಿಂದ ಒಂದು ತೊಟ್ಟು ರಕ್ತವನ್ನು ತೆಗೆದು ಅದನ್ನು ಸ್ಪ್ರಿಪ್ ಮೇಲೆ ಇರಿಸಲಾಗುತ್ತದೆ. ನಂತರ ಅದನ್ನು ಗ್ಲುಕೋಮೀಟರ್‌ನಲ್ಲಿಟ್ಟು ಪರಿಶೀಲಿಸಲಾಗುತ್ತದೆ. ಇದರಿಂದ ಸಕ್ಕರೆ ಮಟ್ಟವನ್ನು ಅಳತೆ ಮಾಡಲಾಗುತ್ತದೆ.
ಈ ಪ್ರಕ್ರಿಯೆ ಸರಳವಾದರೂ ರಕ್ತ ಸಂಗ್ರಹಿಸುವ ಸ್ಟ್ರಿಪ್ ದುಬಾರಿಯಾಗಿದೆ. ಇದನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ ಮತ್ತು ಇದನ್ನು ಜೈವಿಕ ವಿಘಟನೆ ಮಾಡಲಾಗುವುದಿಲ್ಲ. ಚೆನ್ನೈನ ಅಣ್ಣಾ ವಿವಿಯ ಪಿಎಚ್‌ಡಿ ವಿದ್ಯಾರ್ಥಿನಿ ಪ್ರೀತಿ ರಾಮ್‌ದಾಸ್ ಜೈವಿಕ ವಿಘಟನೆ ಮಾಡಬಹುದಾದ ಕಡಿಮೆ ಖರ್ಚಿನ ಪರಿಕರವನ್ನು ಅಭಿವೃದ್ಧಿಪಡಿಸಿದ್ದು ದೇಹದ ಬೆವರನ್ನು ಬಳಸಿಕೊಂಡು ರಕ್ತದ ಸಕ್ಕರೆ ಮಟ್ಟವನ್ನು ಪರಿಶೀಲಿಸಬಹುದಾಗಿದೆ. ಸಸ್ಯ ಹಾಗೂ ಮರದ ಪಾಲಿಮರ್‌ನಿಂದ ಈ ಗ್ಲುಕೋಸ್ ಪತ್ತೆಹಚ್ಚುವ ಪರಿಕರವನ್ನು ತಯಾರಿಸಲಾಗಿದ್ದು ಇದು ಜೈವಿಕ ವಿಘಟಕವಾಗಿದೆ. ಇದನ್ನು ಭೂಮಿಯಡಿಯಲ್ಲಿ ಹೂತಾಗ ಇದು 15 ದಿನಗಳಲ್ಲಿ ವಿಭಜನೆಯಾಗುತ್ತದೆ ಎಂದು ಪ್ರೀತಿ ಬೆಟರ್ ಇಂಡಿಯಾಕ್ಕೆ ಮಾಹಿತಿ ನೀಡಿದ್ದಾರೆ.
2015 ರಲ್ಲಿ ಪ್ರೀತಿ ತನ್ನ ಪ್ರಾಜೆಕ್ಟ್ ಮಾರ್ಗದರ್ಶಿಯಾಗಿರುವ ಅರಿವುಯೋಲಿಯೊಂದಿಗೆ ಜೈವಿಕ ವಿಘಟಕ ನೈರ್ಮಲ್ಯ ಪ್ಯಾಡ್‌ಗಳಿಗೆ ಸಂಬಂಧಿಸಿದಂತೆ ಬೇರೆ ಪ್ರಾಜೆಕ್ಟ್‌ಗಾಗಿ ಸಂಶೋಧನೆ ನಡೆಸುತ್ತಿದ್ದರು. ಹಲವಾರು ಸೆಲ್ಯುಲೋಸ್ ಉತ್ಪನ್ನಗಳ ಸಂಯೋಜನೆಯ ಮೂಲಕ ಅತ್ಯುನ್ನತ-ಹೀರಿಕೊಳ್ಳುವಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದರು. ಈ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ಗೆ ಸೂಕ್ತವಲ್ಲದ ವಸ್ತುವನ್ನು ರಚಿಸಿದರು. ಪರಿಸರ ಪ್ರೇಮಿಯಾಗಿದ್ದ ಪ್ರೀತಿ ಈ ವಸ್ತುವನ್ನು ನಾಶ ಮಾಡುವುದು ಬೇಡ ಎಂದು ತೀರ್ಮಾನಿಸಿದರು. ಅದರ ಗುಣಗಳನ್ನು ಅಭ್ಯಸಿಸಿ ಅದನ್ನು ಬೇರೆ ಯಾವುದಾದರೂ ರೀಸರ್ಚ್ ವರ್ಕ್‌ಗೆ ಬಳಸಬಹುದೇ ಎಂಬುದನ್ನು ಪರಿಶೀಲಿಸಲು ನಿರ್ಧರಿಸಿದರು.
ಈ ಬಗ್ಗೆ ಇನ್ನಷ್ಟು ಸಂಶೋಧನೆಯನ್ನು ನಡೆಸಲು ಪ್ರೀತಿ ಅದನ್ನು ಲ್ಯಾಬ್‌ಗೆ ಕೊಂಡೊಯ್ದರು. ಉಪಕರಣ ಸೆಮಿಕಂಡಕ್ಟರ್ ಎಂದು ತಿಳಿದೊಡನೆ ಪ್ರೀತಿ ಎರಡು ಬಾರಿ ವಸ್ತುವನ್ನು ಪುನರಾವರ್ತಿಸಿದರು. ನಂತರ ಅವರು ಬಯೋಸೆನ್ಸರ್ ಅನ್ನು ಅಭಿವೃದ್ಧಿಪಡಿಸಿದರು. ಬಯೋಸೆನ್ಸರ್‌ಗಳನ್ನು ರಕ್ತದ ಸಕ್ಕರೆ ಮಟ್ಟವನ್ನು ಪರಿಶೀಲಿಸಲು ಬಳಸಲಾಗುತ್ತದೆ. ದೇಹದಲ್ಲಿ ಉತ್ಪಾದನೆಯಾಗುವ ಬೆವರಿನ ಮೂಲಕ 0.4 ಮಿಲಿಮೋಲರ್‌ನಷ್ಟು ಕಡಿಮೆ ಪ್ರಮಾಣದಲ್ಲೂ ಗ್ಲುಕೋಸ್ ಮಟ್ಟ ಪತ್ತೆಹಚ್ಚಬಹುದಾಗಿದೆ.
ಬೆವರಿನ ಮೂಲಕ ಗ್ಲುಕೋಸ್ ಮಟ್ಟವನ್ನು ಪತ್ತೆಹಚ್ಚುವುದಲ್ಲದೆ ಈ ಉಪಕರಣ ಈಥನಾಲ್ ಮಟ್ಟವನ್ನು ಕಂಡುಹಿಡಿಯುತ್ತದೆ ಇದು 0.34 ಮಿಲಿಮೋಲರ್‌ನಲ್ಲಿದ್ದರೂ ಈ ಉಪಕರಣಕ್ಕೆ ಈಥನಾಲ್ ಮಟ್ಟ ಪತ್ತೆಹಚ್ಚುವುದು ಸುಲಭವಾಗಿದೆ. ಈ ಸೆಲ್ಲೊಟೇಪ್ ಹಾಗಿರುವ ಸ್ಟ್ರಿಪ್ ಚಾಲಕರಲ್ಲಿ ಮದ್ಯಪಾನ ಮಟ್ಟವನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ.

ಪ್ರಮುಖ ಸುದ್ದಿ :-   ಸಿಬಿಐ ಜಂಟಿ ನಿರ್ದೇಶಕರಾಗಿ ಐವರು ಡಿಐಜಿಗಳನ್ನು ನೇಮಕ ಮಾಡಿದ ಕೇಂದ್ರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement