ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ವೈದ್ಯೆ ಸೇರಿ ಇಬ್ಬರ ಬಂಧನ

ಮಂಗಳೂರು: ಒಂದು ಕೋಟಿ ರೂಪಾಯಿ ಮೌಲ್ಯದ ಹೈಡ್ರೋವೀಡ್ ಗಾಂಜಾ ಸಾಗಿಸುತ್ತಿದ್ದ ಮಹಿಳಾ ವೈದ್ಯೆಯನ್ನು ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕೇರಳದ ಕಾಂಞಗಾಡ್‌ನ ಹರಿಮಲ ಆಸ್ಪತ್ರೆ ವೈದ್ಯೆ ಮಿನು ರಶ್ಮಿ ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ವೈದ್ಯೆಯ ಜೊತೆಗಿದ್ದ ಇನ್ನೋರ್ವ ಆರೋಪಿ ಕಾಸರಗೋಡಿನ ಅಜ್ಮಲ್‌ ಎಂಬಾತನನ್ನೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ, ವಿದೇಶದಲ್ಲಿರುವ ಡಾ‌. ನದೀರ್ ಸೂಚನೆಯಂತೆ ವೈದ್ಯೆ ಡಾ. ಮಿನು ರಶ್ಮಿ, ಕಾಂಞಗಾಡ್‌ನಿಂದ ಗಾಂಜಾ ತೆಗೆದುಕೊಂಡು ದೇರಳಕಟ್ಟೆಯಲ್ಲಿ ನದೀರ್ ಸ್ನೇಹಿತನಿಗೆ ನೀಡಲು ಆಗಮಿಸಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1 ಕೆಜಿ 236 ಗ್ರಾಂ ತೂಕದ ಹೈಡ್ರೋವೀಡ್ ಗಾಂಜಾ ಇದಾಗಿದ್ದು, ಇದರ ಮೌಲ್ಯ ಸುಮಾರು 30 ಲಕ್ಷದಿಂದ 1 ಕೋಟಿ ರೂ.ಗಳ ವರೆಗೂ ಆಗಬಹುದು ಎಂದು ಅಂದಾಜಿಸಲಾಗಿದೆ. ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆಯನ್ನು ಮುಂದುವರೆಸಿದ್ದಾರೆ.
ಕನ್ಯಾಕುಮಾರಿ ನಿವಾಸಿ, ಪ್ರಸ್ತುತ ಸುರತ್ಕಲ್‍ನಲ್ಲಿ ವಾಸವಿರುವ ಎಂಬಿಬಿಎಸ್ ವಿದ್ಯಾರ್ಥಿನಿ ಮಿನು ರಶ್ಮಿ ಬಂಧಿತ  ಸುರತ್ಕಲ್‌ನಲ್ಲಿ ವಾಸವಾಗಿದ್ದರು. ಕೇರಳದಿಂದ ಗಾಂಜಾ ತರಿಸಿಕೊಂಡು ಮಂಗಳೂರಿನ ಉಳ್ಳಾಲ, ಕೋಣಾಜೆ, ಉಪ್ಪಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಮಂಗಳೂರಿನ ಇಕಾನಮಿಕ್ ಅಂಡ್ ನಾರ್ಕೋಟಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement