ಕೃಷ್ಣಾ ನದಿಯಲ್ಲಿ ಮುಳುಗಿದ್ದ ನಾಲ್ವರು ಸಹೋದರರ ಮೃತದೇಹ ಪತ್ತೆ

ಚಿಕ್ಕೋಡಿ: ಹಾಸಿಗೆ ತೊಳೆಯಲು ಹೋಗಿ ಕೃಷ್ಣಾ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸಹೋದರರ ಶವಗಳನ್ನು ಎನ್‍ಡಿಆರ್‍ಎಫ್ ತಂಡ ಹಾಗೂ ಸ್ಥಳೀಯರು ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳು ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿದ್ದ ನಾಲ್ವರು ಸಹೋದರರು ನೀರು ಪಾಲಾಗಿದ್ದರು. ಈಗ ನಾಲ್ವರ ಮೃತದೇಹ ಪತ್ತೆಯಾಗಿದೆ. ಮಂಗಳವಾರ (ನಿನ್ನೆ) ಒಬ್ಬರ ಮೃತದೇಹ ಹಾಗೂ ಇಂದು (ಬುಧವಾರ) ಮೂವರ ಶವಗಳನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಸ್ಥಳೀಯರು ನದಿಯಲ್ಲಿ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ನಿನ್ನೆ ಪರಶುರಾಮ ಬನಸೊಡೆ ಎಂಬವರ ಶವ ಪತ್ತೆಯಾಗಿತ್ತು. ಬಳಿಕ ಇಂದು ಸಹೋದರರಾದ ಶಂಕರ್, ಸದಾಶಿವ, ಹಾಗೂ ಧರೆಪ್ಪರವರ ಶವ ಹೊರಕ್ಕೆ ತೆಗೆಯಲಾಗಿದೆ. ಮೂರು ದಿನಗಳ ಹಿಂದೆ ಹಾಸಿಗೆ ತೊಳೆಯಲು ಕೃಷ್ಣಾ ನದಿಗೆ ಹೋಗಿದ್ದಾಗ ಅಚಾನಕ್ಕಾಗಿ ಒಬ್ಬರನ್ನು ಕಾಪಾಡಲು ಹೋಗಿ ಮತ್ತೊಬ್ಬರಂತೆ ನಾಲ್ವರು ಸಹೋದರರು ನದಿ ನೀರು ಪಾಲಾಗಿದ್ದರು. ಮೂರು ದಿನಗಳಿಂದ ಈವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಇವರ ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement