ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆಯಲ್ಲಿ ಮತ್ತೆ ಏರಿಕೆ..ಇಂದಿನಿಂದಲೇ ಜಾರಿ..!

ನವದೆಹಲಿ: ಈಗಾಗಲೇ ಪೆಟ್ರೋಲ್​-ಡೀಸೆಲ್​ ಬೆಲೆ ಈಗಾಗಲೇ 100 ರೂ.ದಾಟಿದ್ದು, ಈಗ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆಯನ್ನು ಏರಿಸುವ ಮೂಲಕ ಸರ್ಕಾರ ಜನರಿಗೆ ಶಾಕ್​ ನೀಡಿದೆ.
ತೈಲ ಮಾರುಕಟ್ಟೆ ಕಂಪನಿಗಳು 14.2 ಕೆ.ಜಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ ​ 25.50 ರೂ. ಏರಿಕೆ ಮಾಡಿವೆ. ಇದರೊಂದಿಗೆ ನವದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 834.50 ರೂ ಆಗಿದೆ. ನೂತರ ಪರಿಷ್ಕೃತ ದರ ಜುಲೈ 1ರಿಂದ (ಇಂದಿನಿಂದ) ಅನ್ವಯಯವಾಗಲಿದೆ.
ಮುಂಬೈನಲ್ಲಿ ಗ್ಯಾಸ್​ ಸಿಲಿಂಡರ್ ಬೆಲೆ 834.50 ರೂ., ಕೋಲ್ಕತ್ತಾದಲ್ಲಿ 835.50 ರೂ. ಹಾಗೂ ಚೆನ್ನೈನಲ್ಲಿ 850.50 ರೂ.ಗಳಿಗೆ ಏರಿಕೆಯಾಗಿದೆ.
ಕಮರ್ಷಿಯಲ್​ ಸಿಲಿಂಡರ್​ ಬೆಲೆಯಲ್ಲಿ ಹೆಚ್ಚಳವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಸಿಲಿಂಡರ್​ಗೆ 84 ರೂ.ಗಳಂತೆ ಏರಿಸಿವೆ.
ಕಳೆದ 6 ತಿಂಗಳಲ್ಲಿ 14.2 ಕೆಜಿಯ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​​ಗೆ 140 ರೂ.ಏರಿಕೆಯಾಗಿದೆ. ಈ ವರ್ಷ ಮೊದಲ ಬಾರಿಗೆ ಫೆಬ್ರವರಿ 4ರಂದು ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ 25 ರೂ.ಗಳಿಗೆ ಏರಿಸಲಾಗಿತ್ತು. ಬಳಿಕ ಫೆಬ್ರವರಿ 15ರಂದು 50 ರೂಪಾಯಿ ಏರಿಕೆ ಮಾಡಲಾಗಿತ್ತು. ಫೆಬ್ರವರಿ 25 ಮತ್ತು ಮಾರ್ಚ್​ 1ರಂದು ಮತ್ತೆ 25 ರೂ. ಹೆಚ್ಚಿಸಲಾಗಿತ್ತು. ಏಪ್ರಿಲ್​ 1ರಂದು ಪ್ರತೀ ಸಿಲಿಂಡರ್​​ಗೆ 10 ರೂಪಾಯಿ ಕಡಿತ ಮಾಡಲಾಗಿತ್ತು.
ದೇಶಾದ್ಯಂತ ಪೆಟ್ರೋಲ್​-ಡೀಸೆಲ್​ ಬೆಲೆ ಅತ್ಯಂತ ದುಬಾರಿಯಾಗಿದ್ದು, ಜನರು ಕೈಸುಟ್ಟುಕೊಳ್ಳುವಂತಾಗಿದೆ. ಇದೇ ವೇಳೆ ಗ್ಯಾಸ್​ ಸಿಲಿಂಡರ್​ ಬೆಲೆಯೂ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್​​ ಆಯಿಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ​ ಬೆಲೆ ಹೆಚ್ಚಾದಂತೆ ದೇಶದಲ್ಲಿ​ ಕಳೆದ ವರ್ಷ ನವೆಂಬರ್​ ತಿಂಗಳಿನಿಂದ ಪೆಟ್ರೋಲ್​ ಬೆಲೆ ಏರಿಕೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement