ಕೋವಿಡ್‌:ವಿಶ್ವ ಬ್ಯಾಂಕಿನಿಂದ ಭಾರತಕ್ಕೆ 500 ಮಿಲಿಯನ್ ಡಾಲರ್ ನೆರವು

ನವದೆಹಲಿ: ಕೋವಿಡ್ ಮೊದಲ ಅಲೆ ಹಾಗೂ ಎರಡನೇ ಅಲೆಗೆ ಸಿಕ್ಕು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.
ಭಾರತ ಸೇರಿದಂತೆ ಕೋವಿಡ್ ಸೋಂಕಿನಿಂದಾಗಿ ಹಲವು ದೇಶಗಳಲ್ಲಿ ಲಾಕ್‌ಡೌನ್ ಘೋಷಿಸಲಾಯಿತು. ಪರಿಣಾಮ, ಹಲವರು ಉದ್ಯೋಗ ಕಳೆದುಕೊಂಡರು. ಹಾಗೂ ದೇಶಗಳು ಆರ್ಥಿಕ ಸಂಕಷ್ಟ ಎದುರಿಸಿದವು.
ಈಗ ಭಾರತದಲ್ಲಿ ಕೋವಿಡ್ ಸೋಂಕು ನಿರ್ವಹಣೆಗಾಗಿ ವಿಶ್ವ ಬ್ಯಾಂಕ್ 500 ಮಿಲಿಯನ್ ಡಾಲರ್ (ಸುಮಾರು 3700 ಕೋಟಿ ರೂ.) ನೀಡಲು ಅನುಮೋದನೆ ನೀಡಿದೆ. ಈ ನೆರವು ಭಾರತದಲ್ಲಿ ಕೊರೊನಾ ಸೋಂಕು ನಿರ್ವಹಣೆಗೆ, ಅಸಂಘಟಿತ ನೌಕರರ ಬೆಂಬಲಕ್ಕೆ, ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆಗೆ ಸಹಾಯವಾಗಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಈ ಮೊತ್ತದ ಹೆಚ್ಚಿನ ಭಾಗವನ್ನು ಉದ್ಯೋಗಿಗಳನ್ನು ಬೆಂಬಲಿಸುವುದಕ್ಕೆ ವಿನಿಯೋಗಿಸಲು ವಿಶ್ವ ಬ್ಯಾಂಕ್ ಸಲಹೆ ನೀಡಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement