ವೀಕ್ಷಿಸಿ: ವಿವಾಹವಾದ ನಿಮಿಷಗಳಲ್ಲೇ ತಮಿಳನಾಡಿನ ಈ ವಧುವಿನಿಂದ ಸಮರ ಸಾಹಸ ಪ್ರದರ್ಶನ..!

ವಧು ತನ್ನ ಮದುವೆಯ ದಿನಕ್ಕೆ ತಯಾರಿ ಮಾಡುವುದು ಸಣ್ಣ ಸಾಧನೆಯಲ್ಲ. ಕೂದಲು ಮತ್ತು ಮೇಕಪ್‌ಗಾಗಿ ಸಮಯವನ್ನು ಕಳೆಯಲಾಗುತ್ತದೆ. ಆದರೆ 22 ವರ್ಷದ ನಿಷಾಗೆ, ಅವಳ ಮನಸ್ಸು ಕೇವಲ ವೈವಾಹಿಕ ಜೀವನಕ್ಕೆ ಕಲಾಇಸಿರುವುದೊಂದೇ ಆಗಿರಲಿಲ್ಲ. ವಧುವು ಯುವತಿಯರಿಗೆ ತನ್ನಲ್ಲಿರುವ ಅಮೂಲ್ಯ ಕೌಶಲ್ಯ ತೋರಿಸಸುವುದೂ ಇತ್ತು. ಅದನ್ನು ತಾನು ವಧುವಿನ ಸೀರೆಯುಟ್ಟಿದ್ದಾಗಲೇ ತೋರಿಸಿದಳು..!

ಅವಳ ಮದುವೆ ದಿನದಂದು, ಮದುವೆ ಸಮಾರಂಭ ಮುಗಿದ ಸ್ವಲ್ಪ ಸಮಯದ ನಂತರ, ಎಲ್ಲ ಅತಿಥಿಗಳು 22 ವರ್ಷದ ನಿಶಾ ಸುತ್ತಲೂ ಸೇರಿದರು, ಒಂದು ಪರಿಪೂರ್ಣ ವಲಯ ರೂಪಿಸಿದರು. ಮಧ್ಯದಲ್ಲಿ ನಿಶಾ, ಕೌಶಲ್ಯದಿಂದ ತನ್ನ ಚಾವಟಿಯಂತಹ ಮೃದುವಾದ ಕತ್ತಿಯನ್ನು ಪ್ರಯೋಗಿಸುತ್ತಿದ್ದಳು. ನಿಶಾ ಸಾಂಪ್ರದಾಯಿಕ ಸಮರ ಕಲೆಗಳಾದ ‘ಸುರುಲ್ ವಾಲ್ ವೀಚು’, ‘ರೆಟ್ಟೈ ಕಾಂಬು’ ಮತ್ತು ‘ಆದಿಮರೈ’ ಕರಗತ ಮಾಡಿಕೊಂಡವಳು. ತಮಿಳುನಾಡಿನ ತೂತುಕುಡಿಯ ತಿರುಕೋಲೂರ್ ಗ್ರಾಮದಲ್ಲಿರುವ ತನ್ನ ವಿವಾಹ ಮಂಟಪದ ಮುಂಭಾಗದ ರಸ್ತೆಯಲ್ಲಿ ಪ್ರದರ್ಶನ ನೀಡುತ್ತಿದ್ದಂತೆ ಅತಿಥಿಗಳು ಆಶ್ಚರ್ಯಚಕಿತರಾದರು.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ನಿಶಾ, ತಮ್ಮ ಅಭಿನಯವು ಮಹಿಳೆಯರಿಗೆ ಆತ್ಮರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ತನ್ನ ಪತಿಯಿಂದ ಆಕೆ ತರಬೇತಿಯನ್ನು ಪಡೆದಿದ್ದಾಳೆ ಎಂದು ಪತ್ರಿಕೆ ವರದಿ ಮಾಡಿದೆ.
ನಿಶಾ ಬಿಕಾಂ ಪದವೀಧರೆ, ಪೊಲೀಸ್ ಅಧಿಕಾರಿಯಾಗಲು ಬಯಸುತ್ತಾರೆ. ‘ಕಲರಿಪಯಟ್ಟು’ ಮತ್ತು ‘ಥೀಪಂತಂ’ ನಂತಹ ಅನೇಕ ಸಮರ ಕಲಾ ಪ್ರಕಾರಗಳಲ್ಲಿ ತರಬೇತಿ ಪಡೆದಿದ್ದಾಳೆ. ಅವರು ಮೂರು ವರ್ಷಗಳ ಹಿಂದೆ ತನ್ನ ತರಬೇತಿಯನ್ನು ಪ್ರಾರಂಭಿಸಿದರು, ಮತ್ತು ಶೀಘ್ರದಲ್ಲೇ ಅವರೆಲ್ಲರನ್ನೂ ಕರಗತ ಮಾಡಿಕೊಂಡರು. 2020 ರಲ್ಲಿ ಸಿಲಾಂಬಂ ಸ್ಪರ್ಧೆಯಲ್ಲಿ ನಿಶಾ ಪ್ರಥಮ ಬಹುಮಾನ ಗೆದ್ದಿದ್ದು, ತಿರುಪ್ಪೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು.
ಹೆಣ್ಣುಮಕ್ಕಳಲ್ಲಿ ಆತ್ಮರಕ್ಷಣೆ ರೂಪದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಜಾಗೃತಿ ಮೂಡಿಸಲು ಅವರು ತಮ್ಮ ವಿವಾಹದ ಸಮಯದಲ್ಲಿ ಸಮರ ಕಲೆಗಳನ್ನು ಪ್ರದರ್ಶಿಸಬೇಕೆಂದು ಅವರು ಬಯಸಿದ್ದರು ಎಂದು ಕೃಷಿಕರೂ ಆಗಿರುವ ಪತಿ ರಾಜ್‌ಕುಮಾರ್ ಮೋಸೆಸ್ ಹೇಳಿದ್ದಾರೆ. ನಿಶಾ ಅವರ ಸಾಹಸಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ದಂಪತಿಗೆ ಸಂತೋಷವಾಗಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement