ಜೀವಂತ ಹಾವು ಕೊರಳಿಗೆ ಸುತ್ತಿಕೊಂಡು ಸೈಕಲ್ಲಿನಲ್ಲಿ ಹೊರಟ ವ್ಯಕ್ತಿ..!

ಬೆಳಗಾವಿ: ತಾಲೂಕಿನ ಹಂಗರಗಾ ಗ್ರಾಮದಲ್ಲಿ ಮನೆಗೆ ಬಂದಿದ್ದ ಹಾವನ್ನು ತನ್ನ ವ್ಯಕ್ತಿಯೋರ್ವ ಕೊರಳಿಗೆ ಹಾಕಿಕೊಂಡು ಊರೆಲ್ಲಾ ಸೈಕಲ್ ಮೇಲೆ ಸವಾರಿ ಮಾಡುವ ಮೂಲಕ ಎಲ್ಲರನ್ನೂ ನಿಬ್ಬೆರಗಿಸುವಂತೆ ಮಾಡಿದ್ದಾನೆ.
ಅಜ್ಜ ಕೊರಳಲ್ಲಿ ಹಾವನ್ನು ಸುತ್ತಿಕೊಂಡು ಬಿಂದಾಸ್ ಆಗಿ ಸೈಕಲ್ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶನಿವಾರ ಮಧ್ಯಾಹ್ನ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಹಾವನ್ನು ಕೊರಳಿಗೆ ಹಾಕಿಕೊಂಡು ಸೈಕಲ್ ಸವಾರಿ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಈತನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹಂಗರಗಾ ಗ್ರಾಮದ ವ್ಯಕ್ತಿ ಹಾವನ್ನು ತನ್ನ ಕೊರಳಿಗೆ ಹಾಕಿಕೊಂಡು ಸೈಕಲ್ ಮೇಲೆ ಸುತ್ತಾಡಿದ್ದಾನೆ. ನಂತರ ಸುತಕ್ಷಿತ ಸ್ಥಳಕ್ಕೆ ಅದನ್ನು ಬಿಟ್ಟು ಬಂದಿದ್ದಾನೆ. ತನ್ನ ಕೊರಳಿಗೆ ಹಾವು ಹಾಕಿಂಡು ಸುತ್ತಾಡುತ್ತಿರುವುದನ್ನು ಗ್ರಾಮಸ್ಥರು ನೋಡಿ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಹಾವನ್ನು ಹಾಕಿ ಸುತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement