ಒಂದೂವರೆ ತಿಂಗಳಲ್ಲಿ ಸಿಎಂ ಬದಲಾವಣೆ: ಮತ್ತೆ ಭವಿಷ್ಯ ನುಡಿದ ಯತ್ನಾಳ

posted in: ರಾಜ್ಯ | 0

ಮೈಸೂರು: ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಬಳಿಕವೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಳ ಯತ್ನಾಳ ಅವರು ಇನ್ನು ಒಂದೂವರೆ ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರು ಕೆಳಗಿಳಿಯಲಿದ್ದಾರೆ ಎಂದು ಮತ್ತೆ ಭವಿಷ್ಯ ನುಡಿದಿದ್ದಾರೆ.

ಸೋಮವಾರದಿಂದ ದೇಗುಲಗಳು ಸಾರ್ವಜನಿಕರಿಗೆ ತೆರೆದ ಬೆನ್ನಲ್ಲೇ  ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಅವರು,  ಮತ್ತೆ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಿಗೆ  ಹೇಳಿಕೆ ನೀಡಿದ್ದಾರೆ.

ಪಕ್ಷ ಉಳಿಬೇಕೆಂದರೆ ನಾಯಕತ್ವ ಬದಲಾಗಲೇಬೇಕು. ಆಗಸ್ಟ್ ೧೫ಕ್ಕೂ ಮೊದಲೇ ನಾಯಕತ್ವ ಬದಲಾಗಲಿದೆ. ಒಂದು ದಿನ ಮುಂದೆ ಹೋದರೂ ಇವರು ೧೦೦ ಕೋಟಿ ಲೂಟಿ ಹೊಡೆಯುತ್ತಾರೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ನಾಯಕತ್ವ ಹೋಗಬೇಕು ಎಂದು ಮುಖ್ಯಮಂತ್ರಿ   ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಪರ ಮಾತನಾಡುತ್ತಿರುವ    ಮಠಾಧೀಶರ ಬಗ್ಗೆಯೂ   ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಮಠಾಧಿಪತಿಗಳು ದಕ್ಷಿಣೆ ನೀಡಿದ್ದಾರೆಂದು ರಾಜಕೀಯ ಮಾಡಲು ಬರಬಾರದು. ಮಠಗಳು ಲವ್ ಜಿಹಾದ್ ವಿರುದ್ಧ ಹೋರಾಡಲಿ, ಧರ್ಮ ಕಾರ್ಯ ಮಾಡಲಿ  ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement