ಮದುವೆಯಾದರೆ ಬೇರೆಯಾಗ್ತೇವೆ ಎಂದು ಮನನೊಂದು ಅವಳಿ ಸಹೋದರಿಯರು ಆತ್ಮಹತ್ಯೆ..!

ಶ್ರೀರಂಗಪಟ್ಟಣ: ಮದುವೆಯಾದರೆ ಇಬ್ಬರೂ ಬೇರೆಯಾಗಿಬಿಡುತ್ತೇವೆ ಎಂಬ ಕಾರಣಕ್ಕೆ ಮನನೊಂದು ಅವಳಿ ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅವಳಿ ಸಹೋದರಿಯರಾದ ದೀಪಿಕಾ (19), ದಿವ್ಯಾ (19) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದುವೆಯಾದರೆ ಇಬ್ಬರೂ ಬೇರೆಬೇರೆಯಾಗುತ್ತೇವೆ ಎಂದು ಯೋಚಿಸಿದ ಸಹೋದರಿಯರು ಬೇರ್ಪಡಲು ಇಚ್ಛಿಸದೇ ಒಟ್ಟಿಗೆ ಸಾಯಲು ನಿರ್ಧರಿಸಿದ್ದಾರೆ. ಕೊನೆಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅವಳಿ ಸಹೋದರಿಯರು ಅಂತಿಮ‌ ವರ್ಷದ ಡಿಪ್ಲೊಮಾ‌ ಓದುತ್ತಿದ್ದರು.
ಅವರು ಪೋಷಕರು. ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಬೇರೆ ಬೇರೆ ಮನೆಗಳನ್ನು ಸೇರಿದರೆ ತಮ್ಮ ಬಾಂಧವ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಚಿಂತಿಸಿ ಸಹೋದರಿಯರು ಸಂಜೆ ವೇಳೆಗೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement