ಮೋದಿಗೆ 2,600 ಕೆಜಿ ಮಾವಿನ ಹಣ್ಣು ಕಳುಹಿಸಿದ ಬಾಂಗ್ಲಾ ಪ್ರಧಾನಿ ಹಸೀನಾ

ಢಾಕಾ: ಸ್ನೇಹದ ಗುರುತಾಗಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ 2600 ಕೆಜಿ ಹರಿಬಾಂಗ ತಳಿಯ ಮಾವಿನ ಹಣ್ಣುಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
260 ಪೆಟ್ಟಿಗೆಯನ್ನು ಸಾಗಿಸುತ್ತಿರುವ ಟ್ರಕ್ ಶನಿವಾರ ಮಧ್ಯಾಹ್ನ ಬಾಂಗ್ಲಾದೇಶ-ಭಾರತದ ಗಡಿಯನ್ನು ದಾಟಿತು ಎಂದು ಡೈಲಿ ಸ್ಟಾರ್ ನ್ಯೂಸ್ ಪೇಪರ್ ವರದಿ ಮಾಡಿದೆ.
ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧದ ಗುರುತಾಗಿ ಈ ಮಾವುಗಳನ್ನು ಕಳುಹಿಸಲಾಗುತ್ತಿದೆ ಎಂದು ಬೆನಾಪೊಲ್ ಕಸ್ಟಮ್ಸ್ ಹೌಸ್ ಉಪ ಆಯುಕ್ತ ಅನುಪಮ್ ಚಾಕ್ಮ ಹೇಳಿದ್ದಾರೆಂದು ವರದಿಯಾಗಿದೆ. ಈ ಹಣ್ಣುಗಳು ರಂಗ್ ಪುರ ವಲಯದಲ್ಲಿ ಬೆಳೆದ ಹರಿಬಾಂಗ ತಳಿಯ ಮಾವಿನ ಹಣ್ಣುಗಳಾಗಿವೆ ಎಂದು ಢಾಕಾ ಟ್ರಿಬುನ್ ನ್ಯೂಸ್ ಪೇಪರ್ ವರದಿ ಮಾಡಿದೆ.
ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶದ ಉಪ ಹೈಕಮೀಷನ್ ಕಾರ್ಯದರ್ಶಿ ಎಂಡಿ ಸ್ಯಾಮಿಯಲ್ ಕ್ವಾಡರ್ ಈ ಮಾವಿನ ಹಣ್ಣುಗಳನ್ನು ಪಡೆಯಲಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ರಾಜಕೀಯ ಮುಖಂಡರು ಈ ಹಣ್ಣುಗಳನ್ನು ಸ್ವೀಕರಿಸಲಿದ್ದಾರೆ ಎಂದು ಯುನೈಟೆಡ್ ನ್ಯೂಸ್ ಆಫ್ ಬಾಂಗ್ಲಾದೇಶ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಮಾವಿನ ರಾಯಭಾರತ್ವ ಭಾರತೀಯ ಉಪಖಂಡ ರಾಜಕಾರಣದಲ್ಲಿ ಒಂದು ಸಂಪ್ರದಾಯವಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement