ದೆಹಲಿ ಮನೆಯಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಆರ್.ಕುಮಾರಮಂಗಲಂ ಪತ್ನಿ ಕಿಟ್ಟಿ ಕೊಲೆ

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಆರ್.ಕುಮಾರಮಂಗಲಂ ಅವರ ಪತ್ನಿ ಕಿಟ್ಟಿ ಕುಮಾರಮಂಗಲಂ ಅವರನ್ನು ಕಳೆದ ರಾತ್ರಿ ದೆಹಲಿಯ ನಿವಾಸದಲ್ಲಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಪೊಲೀಸ್ ವರದಿಗಳ ಪ್ರಕಾರ, 67 ವರ್ಷದ ಕಿಟ್ಟಿ ಅವರು ದಿಂಬಿನಿಂದ ಉಸಿರುಗಟ್ಟಿಸಿದ ಕಾರಣ ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ದೆಹಲಿಯ ವಸಂತ್ ಕುಂಜ್ ನಿವಾಸದಲ್ಲಿ ಕಿಟ್ಟಿ ಕುಮಾರಮಂಗಲಂ ಅವರು ಶವವಾಗಿ ಪತ್ತೆಯಾಗಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ, ಸಾವು ದರೋಡೆ ಯತ್ನದ ಪ್ರಯತ್ನದಲ್ಲಿ ನಡೆದಿದೆ ಎನ್ನಲಾಗಿದೆ.
ಹತ್ಯೆಯ ಹಿಂದಿನ ಉದ್ದೇಶವೇ ದರೋಡೆ ಯತ್ನ ಎಂದುಪೊಲೀಸರು ಶಂಕಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು ಎಂದು ಗುರುತಿಸಲ್ಪಟ್ಟ ಪ್ರದೇಶದ 24 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ, ಕಿಟ್ಟಿ ಕುಮಾರಮಂಗಲಂ ಅವರ ಮನೆಯಲ್ಲಿದ್ದಾಗ, ರಾಜು ಸೇರಿದಂತೆ ಮೂವರು ದರೋಡೆ ನಡೆಸಲು ಅವರ ಮನೆಗೆ ಪ್ರವೇಶಿಸಿದ್ದಾರೆ.

ರಾತ್ರಿ 9 ಗಂಟೆ ಸುಮಾರಿಗೆ ಮನೆಯ ಸಹಾಯಕರು ಕುಟುಂಬದ ಧೋಬಿಗೆ ಬಾಗಿಲು ತೆರೆದಾಗ ಈ ಘಟನೆ ನಡೆದಿದೆ. ಸಹಾಯಕಿ ಬಾಗಿಲು ತೆರೆದಾಗ, ಆತನ ಅವಳನ್ನು ಮತ್ತೊಂದು ಕೋಣೆಗೆ ಎಳೆದುಕೊಂಡು ಹೋಗಿ ಕಟ್ಟಿಹಾಕಿದ್ದಾನೆ. ಈ ಮಧ್ಯೆ, ಇನ್ನಿಬ್ಬರು ಹುಡುಗರು ದಿಂಬುನ್ನು ಬಳಸಿ ಕಿಟ್ಟಿ ಕುಮಾರಮಂಗಲಂ ಅವರನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ ಎಂದು ನೈಋತ್ಯ ದೆಹಲಿಯ ಜಿಲ್ಲಾಧಿಕಾರಿ ಪೊಲೀಸ್ (ಡಿಸಿಪಿ) ಇಂಗಿತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

ಈ ಪ್ರಕರಣದ ಪ್ರಮುಖ ಆರೋಪಿ ವಾಶರ್‌ಮ್ಯಾನ್‌ ಬಂಧಿಸಲಾಗಿದ್ದು, ಆತನ ಇಬ್ಬರು ಸಹಚರರು ಪರಾರಿಯಾಗಿದ್ದು ಹುಡುಕಾಟ ನಡೆದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement