ಆಸ್ತಿಕರ ವಿನಾಯಿತಿಗೆ ನಗರಾಭಿವೃದ್ಧಿ ಸಚಿವರಿಂದ ಭರವಸೆ

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ಪೆರಿಕ್ಕರ್ ಸುಂದರ ಅಧ್ಯಕ್ಷತೆಯಲ್ಲಿ ಗುರುವಾರ ಕೈಗಾರಿಕೋಧ್ಯಮಿಗಳ ಮತ್ತು ಎಪಿಎಂಸಿ ವರ್ತಕರ ಆಸ್ತಿಗಳ ತೆರಿಗೆ ಕುರಿತು ಸಭೆ ನಡೆಯಿತು,
ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ನೇತೃತ್ವದಲ್ಲಿ ನೇತೃತ್ವದಲ್ಲಿ ಆಸ್ತಿ ತೆರಿಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ ಅವರಿಗೆ ಮನವಿ ನೀಡಲಾಗಿದೆ.
ಕೈಗಾರಿಕೋಧ್ಯಮಿಗಳ ಮನವಿ ಸ್ವೀಕರಿಸಿದ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ ಅವರಿಂದ ಕೈಗಾರಿಕೋಧ್ಯಮಿಗಳ ಮತ್ತು ಎಪಿಎಂಸಿ ವರ್ತಕರ ಆಸ್ತಿಗಳ ತೆರಿಗೆಯನ್ನು ವಿನಾಯಿತಿಗೊಳಿಸುವ ಭರವಸೆ ದೊರೆತಿದೆ ಎಂದು ಹುಬ್ಬಳ್ಳಿ ವ್ಯಾಪಾರಸ್ಥರ ಸಂಘ ತಿಳಿಸಿದೆ.
ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ ಹಾಗೂ ಕೈಗಾರಿಕೆ ಸಚಿವರಾದ ಜಗದೀಶ ಶೆಟ್ಟರ ಅವರಿಗೂ ಮನವಿ ಸಲ್ಲಿಸಲಾಗಿದೆ.
ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, ಉಪಾಧ್ಯಕ್ಷ ಶಂಕರ ನೇಗಿನಹಾಳ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟೆ ಮತ್ತು ಹುಬ್ಬಳ್ಳಿಯ ಕರ್ನಾಟಕ ಮಾಣಿಜ್ಯೊಧ್ಯಮ ಸಂಸ್ಥೆ ಅಧ್ಯಕ್ಷರಾದ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜವಳಿ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಕೆಸಿಸಿಐ ಮಾಜಿ ಅಧ್ಯಕ್ಷರು, ಕೆಎಲ್ಇ ಸಂಸ್ಥೆ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಸದಸ್ಯರಾದ ಅಪ್ಪಾಜಿ ಬತ್ಲಿ, ಉಳ್ಳಾಗಡ್ಡಿ, ಆಲೂಗಡ್ಡಿ ವರ್ತಕರಾದ ಸುರೇಶ ಹಬೀಬ ಹಾಗೂ ವಿವಿಧ ಜಿಲ್ಲೆಗಳ ಕೈಗರಿಕೋಧ್ಯಮಿಗಳ, ವರ್ತಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement