ಅಪರೂಪದ ಗಂಭೀರ ಕಾಯಿಲೆ ‘ಡುಷೆನ್ ಮಸ್ಕ್ಯುಲರ್‌ಡಿಸ್ಟ್ರೋಫಿ’: ೮ ವರ್ಷದ ಬಾಲಕನ ಚಿಕಿತ್ಸೆಗೆ ಬೇಕಿದೆ ನೆರವು

ಧಾರವಾಡ: ವಿದ್ವತ್ ವಿಶ್ವನಾಥ ಕಂಚೀಬೈಲು ಎಂಬ ೮ ವರ್ಷದ ಬಾಲಕ ‘ಡುಷೆನ್ ಮಸ್ಕ್ಯುಲರ್‌ಡಿಸ್ಟ್ರೋಫಿ’ (Duchene Muscular Dystrophy) ಎಂಬ ಅಪರೂಪದ, ಗಂಭೀರಕಾಯಿಲೆಯಿಂದ ಬಳಲುತ್ತಿದ್ದಾನೆ. ಮಾಂಸಖಂಡಗಳು ಸಂಕುಚಿತಗೊಂಡು, ಕ್ರಮೇಣ ನಡೆದಾಡಲಾಗದೇ ನೆಲಕ್ಕೊರಗಿ ಸಾವು-ಬದುಕಿನ ನಡುವೆ ಹೋರಾಡಬೇಕಾದ ರೋಗ ಇದು.
ಮಹಾರಾಷ್ಟ್ರದ ನವೀ ಮುಂಬೈನಲ್ಲಿರುವ ತಜ್ಞ ವೈದ್ಯಡಾ.ಪ್ರದೀಪ್ ಮಹಾಜನ್‌ ಅವರು ಮಗುವಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ‘ಸ್ಟೆಮ್‌ ಸೆಲ್ಸ್‌ ಥೆರಪಿ’ಅವಶ್ಯಕತೆ ಇದ್ದು, ಒಟ್ಟು ೧೦ ಥೆರಪಿಗಳನ್ನು ಶಿಫಾರಸು ಮಾಡಿದ್ದಾರೆ. ಪ್ರತಿಥೆರಪಿಯ ಖರ್ಚು ೪ ಲಕ್ಷ ರೂಪಾಯಿ ಮತ್ತು ಔಷಧಿಗಳ ಖರ್ಚು ೧ ಲಕ್ಷ ಎಂದು ಚಿಕಿತ್ಸೆಯ ಅಂದಾಜು ವೆಚ್ಚ ಲೆಕ್ಕಿಸಿದ್ದಾರೆ.
ಈಗಾಗಲೇ ಪ್ರಥಮ ಹಂತದರೋಗ ನಿಧಾನ ಮತ್ತು ಪತ್ತೆಗಾಗಿ ಮಿಠಾಯಿ ವ್ಯಾಪಾರಿಯಾಗಿರುವ ವಿದ್ವತ್‌ ತಂದೆ ೧೦ ಲಕ್ಷ ರೂ.ಗಳ ವರೆಗೆವೆಚ್ಚಮಾಡಿದ್ದಾರೆ. .ಕೋವಿಡ್ -೧೯ ಎರಡೂ ಹಂತಗಳ ಲಾಕ್‌ಡೌನ್ ಹಿನ್ನೆಲೆ ವ್ಯಾಪಾರ ಕುಸಿದು, ಅಳಿದುಳಿದ ಉಳಿತಾಯದ ಹಣಕೂಡ ಮಗನ ಚಿಕಿತ್ಸೆಗೆ ಇಲ್ಲಿಯ ವರೆಗೆ ಸಂಪೂರ್ಣ ಖರ್ಚಾಗಿದೆ.
ಬರುವ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ೨ನೇ ಹಂತದ ಥೆರಪಿಗೆ ವಿದ್ವತ್ ಒಳಗಾಗಬೇಕಿದೆ. ಚಿಕಿತ್ಸೆಗಾಗಿ ೫ ಲಕ್ಷ ರೂಪಾಯಿಗಳ ತುರ್ತು ನೆರವಿನ ಅವಶ್ಯಕತೆ ಇದೆ. ಔಷಧಿಗಳ ತುರ್ತು ಲಭ್ಯತೆಯ ಸೌಲಭ್ಯ ಬೆಂಗಳೂರಿನಲ್ಲಿ ಮಾತ್ರವಿರುವ ಕಾರಣ, ಸದ್ಯ ತಾತ್ಕಾಲಿಕವಾಗಿ ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ್ದಾರೆ.
ಕು.ವಿದ್ವತ್‌ಗೆ ೧೬ ವರ್ಷಗಳ ತನಕ ಚಿಕಿತ್ಸೆ ಮುಂದುವರೆಯಲಿದ್ದು, ಅಲ್ಲಿಯತನಕ ಒಟ್ಟು ೧೦ ಥೆರಪಿಗಳು ಪೂರ್ಣಗೊಳ್ಳಬೇಕಿವೆ. ಈಗಾಗಲೇ ಮಾನ್ಯ ಪ್ರಧಾನಮಂತ್ರಿ, ಕೇಂದ್ರ ಆರೋಗ್ಯ ಖಾತೆ ಸಚಿವರು, ಮಾನ್ಯ ಮುಖ್ಯಮಂತ್ರಿ ಹಾಗೂ ರಾಜ್ಯದ ಆರೋಗ್ಯಖಾತೆ ಮಂತ್ರಿಯವರಲ್ಲಿ ಮುಂದಿನ ಚಿಕಿತ್ಸೆಗಳಿಗಾಗಿ ಮಾನವೀಯತೆ ದೃಷ್ಟಿಯಿಂದ ಚಿಕಿತ್ಸೆ/ಹಣಕಾಸು ನೆರವು ಒದಗಿಸುವಂತೆ ಮನವಿ ಮಾಡಲಾಗಿದೆ.
ದಯವಿಟ್ಟು ಸಹೃದಯ ದಾನಿಗಳು ತಮಗಿರುವ ಏಕೈಕ ಮಗನನ್ನು ಉಳಿಸಿಕೊಳ್ಳಲು, ಸಕಾಲಿಕ ಚಿಕಿತ್ಸೆಗೆ ಮಾನವೀಯತೆ ದೃಷ್ಟಿಯಿಂದ ದಾನಿಗಳು, ಸಂಘ ಸಂಸ್ಥೆಗಳು ಧನ ಸಹಾಯ ಮಾಡುವಂತೆ ತಾಯಿ-ತಂದೆ ಲಕ್ಷ್ಮೀ ಹಾಗೂ ವಿಶ್ವನಾಥ ಕಂಚೀಬೈಲು ಅವರು ವಿನಂತಿಸಿಕೊಂಡಿದ್ದಾರೆ.
ಅವರ ಖಾತೆ ವಿವರ ಇಂತಿದೆ:
ಕೆ.ಎನ್. ವಿಶ್ವನಾಥ,
ಖಾತೆ ಸಂಖ್ಯೆ: ೦೫೫೨೫೦೦೧೧೫೮೬೦೫೦೧
ಐ.ಎಫ್.ಎಸ್.ಸಿ.ಕೋಡ್: ಕೆಎಆರ್‌ಬಿ೦೦೦೦೦೫೫
ಫೋನ್ ಪೇ: +೯೧ ೮೯೦೪೪ ೯೨೩೩೫

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಈ ಕುರಿತು ಕೆ.ಎನ್. ವಿಶ್ವನಾಥ ಆಕಾಶ ಗಂಗಾ, ಮನೆ ಸಂ. ೧೧೪, ೨ನೇ ಅಡ್ಡರಸ್ತೆ, ದಾನೇಶ್ವರಿ ನಗರ, ವಿದ್ಯಾಗಿರಿ, ಧಾರವಾಡ- ೫೮೦೦೦೪ / ಸಂಪರ್ಕ: ೮೯೦೪೪ ೯೨೩೩೫ ಅಥವಾ ಪರ್ಯಾಯ ಸಂಪರ್ಕ: ಮಿಲಿಂದ ಮುದ್ರಬೆಟ್- ೯೪೮೧೨ ೪೯೮೮೪ ಅವರನ್ನು ಸಂರ್ಕಿಸಲು ತಿಳಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement