ಗಮನಿಸಿ.. ಜುಲೈ 26 ರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪರೀಕ್ಷೆ : ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಾಕಿ ಉಳಿದಿರುವ ಸೆಮಿಸ್ಟರ್ ಪರೀಕ್ಷೆಗಳನ್ನು ಜುಲೈ 26 ರಿಂದ ಪ್ರಾರಂಭಿಸಲು ಮುಂದಾಗಿದೆ.
ಬಾಕಿ ಉಳಿದ ಪರೀಕ್ಷೆಗಳ ವೇಳಾಪಟ್ಟಿಯನ್ನು ವಿಟಿಯು ಅತೀ ಶೀಘ್ರದಲ್ಲಿ ಪ್ರಕಟಿಸಲಿದೆ ಎಂದು ತಿಳಿಸಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿ ವರದಿ ಸಲ್ಲಿಸಬೇಕಿದ್ದು, ಸಿಡಿ ಮೂಲಕ ಪ್ರಾಜೆಕ್ಟ್, ಸೆಮಿನಾರ್​ ವರದಿ ಸಲ್ಲಿಸಬೇಕಿದೆ.

VTU Circular-1153

ಪ್ರಥಮ ಸೆಮಿಸ್ಟರ್​ ಪದವಿ ಮತ್ತು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜುಲೈ 19ರಿಂದ ಅಧ್ಯಯನಕ್ಕಾಗಿ ರಜೆಯನ್ನು ಘೋಷಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳ ಬಳಿಕ 2ನೇ ಸೆಮಿಸ್ಟರ್​ ಆರಂಭವಾಗಲಿದೆ., ಅಟಾನಮಸ್​ ಕಾಲೇಜುಗಳಿಗೆ ಈ ನಿಯಮ ಅನ್ವಯವಾಗಲಿದೆ. ಈ ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸುತ್ತೋಲೆ ಪ್ರಕಟಿಸಿದೆ.
ರಾಜ್ಯದಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ವಿಟಿಯು ಕೂಡ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಇದೀಗ ಪರೀಕ್ಷೆಗಳನ್ನು ಜುಲೈ 26ರಿಂದ ಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement