ರಾಜ್ಯಕ್ಕೆ ೧೩೫.೯೨ ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ

posted in: ರಾಜ್ಯ | 0

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವಾಲಯವು ೧೭ ರಾಜ್ಯಗಳಿಗೆ ೯,೮೭೧ ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ ೧೩೫.೯೨ ಕೋಟಿ ರೂ. ನೀಡಲಾಗಿದ್ದು, ೨೦೨೧-೨೨ನೇ ಸಾಲಿನಲ್ಲಿ ಒಟ್ಟು ೫೪೩.೬೭ ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಸಚಿವಾಲಯದ ವೆಚ್ಚ ಇಲಾಖೆ ವಿತರಣೆ ನಂತರದ ಆದಾಯ ಕೊರತೆಯ(ಪಿಡಿಆರ್‌ಡಿ) ೪ನೇ ಮಾಸಿಕ ಅನುದಾನದ ಮೊತ್ತ ೯,೮೭೧ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ೩೯,೩೮೪ ಕೋಟಿ ರೂ. ಆದಾಯ ಕೊರತೆ ಹಣ ಬಿಡುಗಡೆಯಾಗಿದೆ.

ವಿತರಣೆ ನಂತರದ ಆದಾಯ ಕೊರತೆ ಅನುದಾನವನ್ನು ಸಂವಿಧಾನದ ೨೭೫ನೇ ಪರಿಚ್ಛೇದದ ಅನ್ವಯ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ. ರಾಜ್ಯಗಳಿಗೆ ವಿತರಣೆ ನಂತರದ ಆದಾಯ ಕೊರತೆ ಅಂತರವನ್ನು ಪೂರೈಸಲು ಮಾಸಿಕ ಕಂತುಗಳಲ್ಲಿ  ೧೫ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಅನುದಾನ ಬಿಡುಗಡೆ ಮಾಡಲಾಗುತ್ತದೆ. ೨೦೨೧-೨೨ನೇ ಸಾಲಿನಲ್ಲಿ ೧೭ ರಾಜ್ಯಕ್ಕೆ  ಪಿಡಿಆರ್‌ಡಿ ಅನುದಾನ ಬಿಡುಗಡೆಗೆ ಆಯೋಗ ಶಿಫಾರಸು ಮಾಡಿತ್ತು.

ಕರ್ನಾಟಕ, ಆಂಧ್ರ, ಅಸ್ಸಾಂ, ಹರ್ಯಾಣ, ಹಿಮಾಚಲಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಯೋಗ ಶಿಫಾರಸು ಮಾಡಿತ್ತು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement