ಲಕ್ನೊ ಹೊರಗಿನ ಕಾಕೋರಿಯಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರ ಬಂಧಿಸಿದ ಎಟಿಎಸ್‌

ಲಕ್ನೋ: ಒಂದು ಪ್ರಮುಖ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಭಾನುವಾರ ಕಾಕೋರಿ ಪಟ್ಟಣದಿಂದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಇಬ್ಬರು ಭಯೋತ್ಪಾದಕರು ಅಲ್ ಖೈದಾ ಜೊತೆ ಸಂಬಂಧ ಹೊಂದಿದ್ದು, ರಾಜಧಾನಿ ಲಕ್ನೋ ಹೊರಗಡೆ ಇರುವ ಕಾಕೋರಿಯಲ್ಲಿರುವ ಮನೆಯೊಳಗೆ ತಲೆಮರೆಸಿಕೊಂಡಿದ್ದರು.
ಎಟಿಎಸ್ ತಂಡ ಇಬ್ಬರ ಜಾಡು ಹಿಡಿದು ಒಂದು ವಾರದಿಂದ ಅನುಸರಿಸಿದ್ದರಿಂದ ಈ ಬಂಧನಗಳು ನಡೆದವು. ಎಬಿಪಿ ವರದಿಯ ಪ್ರಕಾರ, ಇವರಿಬ್ಬರು “ಮಾನವ ಬಾಂಬ್” ಗಳನ್ನು ಬಳಸಿಕೊಂಡು ರಾಜ್ಯ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿ ಯೋಜಿಸುತ್ತಿದ್ದರು. ಈ ಪ್ರದೇಶಕ್ಕೆ ಬಾಂಬ್‌ ನಿಷ್ಕ್ರಿಯ ದಳವನ್ನು ಸಹ ಕರೆಯಲಾಗಿದೆ.
ಭಾನುವಾರದ ವರದಿಗಳ ಪ್ರಕಾರ, ಭಯೋತ್ಪಾದಕರಿದ್ದ ಮನೆಯ ಸಮೀಪವಿರುವ ಪ್ರದೇಶವನ್ನು ಮೊಹರು ಮಾಡಲಾಗಿದೆ ಮತ್ತು ಸುತ್ತಮುತ್ತಲಿನ ಮನೆಗಳನ್ನು ಸುರಕ್ಷತಾ ಕ್ರಮಗಳ ಭಾಗವಾಗಿ ಸ್ಥಳಾಂತರಿಸಲಾಗಿದೆ.
ಐಜಿ ಜಿ.ಕೆ. ಗೋಸ್ವಾಮಿ ನೇತೃತ್ವದ ಎಟಿಎಸ್ ತಂಡ ಇವರಿಬ್ಬರನ್ನು ಬಂಧಿಸಿದ ನಂತರ ಈ ಕ್ರಮ ಐಗೊಳ್ಳಲಾಗಿದೆ.. ಮಿನಾಜ್ ಮತ್ತು ಮಸ್ರುದ್ದೀನ್ ಎಂದು ಗುರುತಿಸಲಾಗಿರುವ ಇಬ್ಬರು ಭಯೋತ್ಪಾದಕರನ್ನು ನಿಭಾಯಿಸುವವರು ಪಾಕಿಸ್ತಾನದವರು ಎಂದು ಐಡಿ ಸುದ್ದಿಗಾರರಿಗೆ ತಿಳಿಸಿದೆ.
ಇಬ್ಬರನ್ನು ಕೂಡಿಹಾಕಿದ ಮನೆ ಶಾಹಿದ್ ಎಂಬ ವ್ಯಕ್ತಿಗೆ ಸೇರಿದೆ ಎಂದು ವರದಿಯಾಗಿದೆ. ವಾಸಿಮ್ ಎಂಬ ಇನ್ನೊಬ್ಬ ವ್ಯಕ್ತಿ 15 ವರ್ಷಗಳಿಂದ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದ.
ಎಟಿಎಸ್ ಎರಡು “ಪ್ರೆಶರ್ ಕುಕ್ಕರ್” ಬಾಂಬ್‌ಗಳ ಜೊತೆಗೆ ಡಿಟೋನೇಟರ್ ಮತ್ತು 6-7 ಕೆಜಿ ತೂಕದ ಸ್ಫೋಟಕಗಳನ್ನು ಮನೆಯಿಂದ ವಶಪಡಿಸಿಕೊಂಡಿದೆ.
ದಾಳಿಕೋರರ ಉದ್ದೇಶಗಳು ಸ್ಪಷ್ಟವಾಗಿಲ್ಲವಾದರೂ, ಲಕ್ನೋದಲ್ಲಿ ಸಂಸದರು ಮತ್ತು ಮುಖಂಡರು ಸೇರಿದಂತೆ ಬಿಜೆಪಿ ನಾಯಕತ್ವದ ಕೆಲವು ಸದಸ್ಯರ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಯೋಜಿಸಿದ್ದಾರೆಂದು ಕೆಲವು ವರದಿಗಳು ಸೂಚಿಸುತ್ತವೆ. ಭಯೋತ್ಪಾಕರಿದ್ದ ಮನೆಯು ಕಾಕೋರಿ ಬಿಜೆಪಿ ಮುಖಂಡ ಕೌಶಲ್ ಕಿಶೋರ್ ಅವರ ನಿವಾಸಕ್ಕೆ ಹತ್ತಿರದಲ್ಲಿದೆ.

ಪ್ರಮುಖ ಸುದ್ದಿ :-   ಮನೆ ಮುಂದೆಯೇ ಗುಂಡು ಹಾರಿಸಿ ಬಿಜೆಪಿ ನಾಯಕ-ಖ್ಯಾತ ಉದ್ಯಮಿ ಗೋಪಾಲ ಖೇಮ್ಕಾ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement