ಹೊಸ ಜನಸಂಖ್ಯಾ ನೀತಿ ಅನಾವರಣಗೊಳಿಸಿದ ಸಿಎಂ ಯೋಗಿ ಅದಿತ್ಯನಾಥ, ಜನಸಂಖ್ಯೆ ಬೆಳವಣಿಗೆ 2.1% ಕ್ಕೆ ತರುವ ಗುರಿ

ಲಕ್ನೋ: ವಿಶ್ವ ಜನಸಂಖ್ಯಾ ದಿನಾಚರಣೆಯಂದು ಭಾನುವಾರ ಉತ್ತರ ಪ್ರದೇಶ ಸರ್ಕಾರ 2021-2030ರ ಹೊಸ ಜನಸಂಖ್ಯಾ ನೀತಿಯನ್ನು ಬಿಡುಗಡೆ ಮಾಡಿದೆ.
ಹೊಸ ಜನಸಂಖ್ಯಾ ನೀತಿಯಲ್ಲಿ, ಜನನ ಪ್ರಮಾಣವನ್ನು 2026 ರ ವೇಳೆಗೆ ಪ್ರತಿ ಸಾವಿರ ಜನಸಂಖ್ಯೆಗೆ 2.1 ಕ್ಕೆ ಮತ್ತು 2030 ರ ವೇಳೆಗೆ 1.9 ಕ್ಕೆ ತಲುಪಿಸುವ ಗುರಿ ನಿಗದಿಪಡಿಸಲಾಗಿದೆ ರಾಜ್ಯದ ಒಟ್ಟು ಜನನ ಪ್ರಮಾಣ ಪ್ರಸ್ತುತ ಶೇಕಡಾ 2.7 ಆಗಿದೆ.
ಉದ್ಘಾಟನಾ ಸಮಾರಂಭದಲ್ಲಿ ನೀತಿಯನ್ನು ಅನಾವರಣಗೊಳಿಸುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಜನಸಂಖ್ಯೆಯನ್ನು ನಿಯಂತ್ರಿಸಲು ಇಬ್ಬರು ಮಕ್ಕಳ ನಡುವೆ ಅಂತರವಿರಬೇಕು ಎಂದು ಹೇಳಿದರು.
ಹೆಚ್ಚುತ್ತಿರುವ ಜನಸಂಖ್ಯೆಯು ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ಹೇಳಿದ ಅವರು, ಜನಸಂಖ್ಯೆಯ ಬೆಳವಣಿಗೆಯು ಬಡತನಕ್ಕೂ ಸಂಬಂಧಿಸಿದೆ. ಜನಸಂಖ್ಯಾ ನೀತಿ 2021-2030ರಲ್ಲಿ ಪ್ರತಿ ಸಮುದಾಯವನ್ನು ನೋಡಿಕೊಳ್ಳಲಾಗಿದೆ.” 2018 ರಿಂದ ರಾಜ್ಯ ಸರ್ಕಾರ ಈ ನೀತಿಯ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ಆದಿತ್ಯನಾಥ್ ಹೇಳಿದರು.
ಹೊಸ ಜನಸಂಖ್ಯಾ ನೀತಿ ಕರಡು
ಜನಸಂಖ್ಯಾ ನಿಯಂತ್ರಣ ಶಾಸನದ ಕರಡನ್ನು ಸಾರ್ವಜನಿಕ ವಲಯದಲ್ಲಿ ಶನಿವಾರ ಬಿಡುಗಡೆ ಮಾಡಲಾಗಿದೆ. ಪ್ರಸ್ತಾವಿತ ನೀತಿಯ ಮೂಲಕ, ಕುಟುಂಬ ಯೋಜನೆ ಕಾರ್ಯಕ್ರಮದಡಿ ಹೊರಡಿಸಲಾದ ಗರ್ಭನಿರೋಧಕ ಕ್ರಮಗಳ ಪ್ರವೇಶವನ್ನು ಹೆಚ್ಚಿಸಲು ಮತ್ತು ಸುರಕ್ಷಿತ ಗರ್ಭಪಾತಕ್ಕೆ ಸರಿಯಾದ ವ್ಯವಸ್ಥೆಯನ್ನು ಒದಗಿಸಲು ಪ್ರಯತ್ನಿಸಲಾಗುತ್ತದೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement