ಅಣ್ಣಾವ್ರ ಸ್ಮಾರಕದ ಎದುರು ಹಾರ ಬದಲಿಸಿಕೊಂಡ ಡಾ.ರಾಜಕುಮಾರ ಅಭಿಮಾನಿಗಳು

posted in: ರಾಜ್ಯ | 0

ಬೆಂಗಳೂರು: ಡಾ.ರಾಜಕುಮಾರ ಅವರು ತಮ್ಮ ಅಭಿಮಾನಿಗಳನ್ನೇ ದೇವರು ಅಂದವರು. ಆದರೆ ಅಭಿಮಾನಿಗಳ ಪಾಲಿಗೆ ಅವರೇ ದೇವರು. ಹೀಗಾಗಿಯೇ ಡಾ. ರಾಜಕುಮಾರ ಅವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಮೂಲತಃ ಬೆಂಗಳೂರಿನವರೇ ಆದ ಈ ನವದಂಪತಿಗಳು ಅಣ್ಣಾವ್ರ ಕಟ್ಟಾ ಅಭಿಮಾನಿಗಳು. ಅದು ಎಷ್ಟರ ಮಟ್ಟಿಗೆ ಅಂದ್ರೆ ಮದುವೆ ಅಂತ ಆದರೆ ಅಣ್ಣಾವ್ರ ಸಮ್ಮುಖದಲ್ಲೇ ಆಗಬೇಕು ಅಂತ ತೀರ್ಮಾನಿಸಿದ್ದರಂತೆ.

ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸ್ಮಾರಕಕ್ಕೆ ದೂರದ ಊರುಗಳಿಂದ, ಹೊರ ರಾಜ್ಯಗಳಿಂದಲೂ ಬರುವ ಅಣ್ಣಾವ್ರ ಅಭಿಮಾನಿಗಳಿಗೇನೂ ಕೊರತೆ ಇಲ್ಲ. ಅಷ್ಟೇ ಯಾಕೆ ಅಣ್ಣಾವ್ರ ಸ್ಮಾರಕದ ಬಳಿಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕು, ಮದುವೆ ಆಗಬೇಕು, ಮಗುವಿಗೆ ನಾಮಕರಣ ಮಾಡಬೇಕು ಅನ್ನೋ ಆಸೆ ಹಲವಾರು ಅಭಿಮಾನಿಗಳದ್ದು.

ತಮ್ಮ ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರೂ ಅಣ್ಣಾವ್ರ ಸಮ್ಮುಖದಲ್ಲಿ ಆಗಬೇಕು, ಅವರ ಆಶೀರ್ವಾದ ಪಡೆದೇ ಆಗಬೇಕು ಅನ್ನುವಷ್ಟು ಪ್ರೀತಿ, ಅಭಿಮಾನ, ಗೌರವ ಅಭಿಮಾನಿಗಳಲ್ಲಿ. ಹಾಗೇ ಮೊದಲಿಂದಲೂ ಹಲವು ಕಾರ್ಯಕ್ರಮಗಳು, ಸಮಾರಂಭಗಳು ಡಾ.ರಾಜ್ ಸ್ಮಾರಕದ ಬಳಿ ನಡೆಯುತ್ತಿದ್ದವು. ಆದರೆ ಕಳೆದ ಒಂದೂವರೆ ವರ್ಷಗಳಿಂದ ಕೊರೋನಾ ಅಟ್ಟಹಾಸದಿಂದಾಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದ ಕಾರಣ, ಇಂತಹ ಯಾವುದೇ ಕಾರ್ಯಕ್ರಮಗಳೂ ನಡೆದಿರಲಿಲ್ಲ. ಮಾತ್ರವಲ್ಲ ಅಣ್ಣಾವ್ರ ಪುಣ್ಯಸ್ಮರಣೆ ಹಾಗೂ ಹುಟ್ಟುಹಬ್ಬಕ್ಕೂ ಅಭಿಮಾನಿಗಳು ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಣ್ಣಾವ್ರ ಅಭಿಮಾನಿಗಳು ಲಾಕ್ ಡೌನ್ ಅನ್ಲಾಕ್ ಆಗಲು ಕಾತರದಿಂದ ಕಾಯುತ್ತಿದ್ದರು. ಲಾಕ್ ಡೌನ್ ಅನ್ಲಾಕ್ ಆಗಲಿ ಎಂದು ಆ ಐದೂ ಜೋಡಿಗಳೂ ಕಾಯುತ್ತಿದ್ದರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಮೂಲತಃ ಬೆಂಗಳೂರಿನವರೇ ಆದ ಈ ನವದಂಪತಿಗಳು ಅಣ್ಣಾವ್ರ ಕಟ್ಟಾ ಅಭಿಮಾನಿಗಳು. ಅದು ಎಷ್ಟರ ಮಟ್ಟಿಗೆ ಅಂದ್ರೆ ಮದುವೆ ಅಂತ ಆದರೆ ಅಣ್ಣಾವ್ರ ಸಮ್ಮುಖದಲ್ಲೇ ಆಗಬೇಕು ಅಂತ ತೀರ್ಮಾನಿಸಿದ್ದರಂತೆ.

ಆದರೆ ಕಳೆದ ಒಂದೂವರೆ ವರ್ಷದಿಂದ ಕೊರೊನಾ ಹಾಗೂ ಲಾಕ್ ಡೌನ್ ಅನ್ಲಾಕ್ ನಿಂದಾಗಿ ಆ ಕನಸು ಈಡೇರಿರಲಿಲ್ಲ. ಸರಳವಾಗಿ ಮದುವೆ ಮಾಡಿಕೊಂಡಿದ್ದರು.

ಈಗ ಲಾಕ್ ಡೌನ್ ಅನ್ಲಾಕ್ ಆಗಿದ್ದೇ ತಡ ಅಣ್ಣಾವ್ರ ಸ್ಮಾರಕಕ್ಕೆ ಧಾವಿಸಿದ್ದ ಐದೂ ಜೋಡಿಗಳೂ ಮತ್ತೆ ಹಸೆಮಣೆ ಏರುವಂತೆ ಸಿಂಗಾರಗೊಂಡಿದ್ದರು. ಐವರೂ ವರರು ತಲೆಗೆ ಮೈಸೂರು ಪೇಟ ಧರಿಸಿದ್ದರೆ, ಮಧುಮಕ್ಕಳು ಹೊಸ ಸೀರೆ ಧರಿಸಿ ಮಿಂಚುತ್ತಿದ್ದರು.

ಐದೂ ಜೋಡಿಗಳೂ ಡಾ.ರಾಜ್ ಸ್ಮಾರಕದ ಬಳಿ ಮತ್ತೆ ಹಾರ ಬದಲಿಸಿಕೊಂಡು ತಮ್ಮ ಕನಸನ್ನು ನನಸಾಗಿಸಿಕೊಂಡರು. ಜೊತೆಗೆ ಅಣ್ಣಾವ್ರಂತೆಯೇ ತಾವೂ ನೇತ್ರದಾನ ಮಾಡುವ ಮೂಲಕ ಅಭಿಮಾನ ಮೆರೆದರು.

ನಾರಾಯಣ ನೇತ್ರಾಲಯದಿಂದ ವೀರೇಶ್ ಎಂಬುವವರು ಎಲ್ಲರಿಂದ ನೇತ್ರದಾನ ಮಾಡುವ ಬಗ್ಗೆ ಹೆಸರುಗಳನ್ನು ನೋಂದಣಿ ಮಾಡಿಸಿಕೊಂಡು, ಸಹಿ ಹಾಕಿಸಿಕೊಂಡರು. ಈ ಶುಭ ಕಾರ್ಯದಲ್ಲಿ ಹಲವಾರು ಮಂದಿ ಡಾ.ರಾಜಕುಮಾರ ಅವರ ಅಭಿಮಾನಿಗಳೂ ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement