ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ನೀಡಿದ ಡೊಮಿನಿಕಾ ನ್ಯಾಯಾಲಯ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ ಎಸಗಿ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಗೆ ಸೋಮವಾರ ವೈದ್ಯಕೀಯ ಜಾಮೀನು ಮಂಜೂರಾಗಿದೆ.
ಆಂಟಿಗುವಾಗೆ ಚಿಕಿತ್ಸೆ ಕಾರಣಕ್ಕೆ ತೆರಳಲು ಆರೋಪಿ ಮೆಹುಲ್ ಚೋಕ್ಸಿಗೆ ಡೊಮಿನಿಕಾದ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
2018ರಲ್ಲಿ ಚೋಕ್ಸಿ ಭಾರತ ತೊರೆದು ಆಂಟಿಗುವಾಗೆ ಪರಾರಿಯಾಗಿದ್ದರು. ಭಾರತದಲ್ಲಿ ತಮ್ಮ ವಿರುದ್ಧ ಕಾನೂನು ಕ್ರಮ ಶುರುವಾಗುತ್ತಿದ್ದಂತೆ ಅಕ್ರಮವಾಗಿ ಡೊಮಿನಿಕಾ ನುಸುಳಿ ಅಲ್ಲಿನ ಪೊಲೀಸರಿಂದ ಬಂಧಿತರಾಗಿದ್ದರು. ಮೇ 23ರಿಂದಲೂ ಡೊಮಿನಿಕಾದಲ್ಲಿ ಬಂಧಿತರಾಗಿದ್ದರು. ಈಚೆಗಷ್ಟೆ ಉದ್ಯಮಿ ಮೆಹುಲ್ ಚೋಕ್ಸಿ ಅಕ್ರಮ ವಲಸಿಗ ಎಂದು ಡೊಮಿನಿಕಾ ಘೋಷಿಸಿತ್ತು. ಸೋಮವಾರ ವೈದ್ಯಕೀಯ ಕಾರಣಕ್ಕೆ ಜಾಮೀನು ದೊರೆತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿದಂತೆ ಜೂನ್ 10ರಂದು ಕೇಂದ್ರೀಯ ತನಿಖಾ ದಳ ಮೆಹುಲ್ ಚೋಕ್ಸಿ ಮತ್ತು ಇತರೆ 21 ಜನರ ವಿರುದ್ಧ ಹೊಸ ಚಾರ್ಜ್ ಶೀಟ್ ಸಲ್ಲಿಸಿತ್ತು.
2017ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಸಹಾಯದಿಂದ ಚೋಕ್ಸಿ ಬ್ಯಾಂಕಿಗೆ 13,500 ಕೋಟಿ ರೂ.ಗಳ ವಂಚನೆ ಎಸಗಿದ ನಂತರ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾಗಿ ಸಿಬಿಐ ಉಲ್ಲೇಖಿಸಿತ್ತು. ಚೋಕ್ಸಿ ವಿರುದ್ಧ ಸಾಕ್ಷ್ಯನಾಶ, ವಂಚನೆ, ಪಿತೂರಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಆರೋಪಗಳನ್ನು ಸಿಬಿಐ ಮಾಡಿದೆ. ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement