ಬೆವಫಾ ಸನಮ್..!: ಪ್ರೇಮಿಕಾ ಮದುವೆ ಮಂಟಪದ ಹೊರಗೆ ಕೂಗುತ್ತಲೇ ಇದ್ದಳು, ಪ್ರೇಮಿ ಮತ್ತೊಬ್ಬಳನ್ನು ಮದುವೆಯಾದ.. ವೀಕ್ಷಿಸಿ

ಭಾರತೀಯ ವಿವಾಹಗಳು ಇತ್ತೀಚಿಗೆ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ, ಏಕೆಂದರೆ ಇದು ಅನೇಕ ಅತಿಥಿಗಳು, ಕುಟುಂಬ ಸದಸ್ಯರು ಮತ್ತು ಕೆಲವು ಬಾರಿ ಮಾಜಿ ಪ್ರೇಮಿಯನ್ನು ಒಳಗೊಂಡಿರುತ್ತದೆ. ಇಂಥದ್ದೇ ಘಟನೆಯೊಂದರಲ್ಲಿ ಮದುವೆ ಮಂಟಪದ ಹೊರಗೆ ಹುಡುಗಿಯೊಬ್ಬಳು ಬಾಬು-ಬಾಬು ಎಂದು ಕೂಗಲು ಪ್ರಾರಂಭಿಸಿದಾಗ ಒಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಈ ಹೃದಯ ಕದಡುವ ವಿಡಿಯೊದಲ್ಲಿ, ಹುಡುಗಿ ಕಿರುಚುತ್ತಿರುವುದನ್ನು ಕಾಣಬಹುದು, ತನ್ನ ಪ್ರೇಮಿ ಮತ್ತೊಂದು ಹುಡುಗಿಯನ್ನು ಮದುವೆಯಾಗುತ್ತಿರುವಾಗ ಮದುವೆಯ ಸಭಾಂಗಣದ ಹೊರಗೆ ತನ್ನ ಪ್ರೇಮಿಯನ್ನು ಪ್ರೇಮಿಕಾ ಹತಾಶೆಯಿಂದ ಕರೆಯುತ್ತಾಳೆ, ಕೂಗುತ್ತಾಳೆ, ಪರಿತಪಿಸುತ್ತಾಳೆ. ಈ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ನಡೆದಿದೆ.

ಮಹಿಳೆ ತನ್ನ ಗೆಳೆಯನನ್ನು ಕೂಗಿಯೇ ಕೂಗಿದಳು., ತನ್ನೊಂದಿಗೆ ಮಾತನಾಡಲು ಅವನನ್ನು ಬೇಡಿಕೊಂಡಳು. ಅವಳು ಮದುವೆ ಮಂಟಪವನ್ನು ಪ್ರವೇಶಿಸಲು ಪ್ರಯತ್ನಿಸಿದಳು ಆದರೆ ಹೊರಗೆ ನಿಲ್ಲಿಸಲಾಯಿತು. ಝೀನ್ಯೂಸ್‌ನ ವರದಿಯ ಪ್ರಕಾರ, ಕಾನ್ಪುರದ ನಿವಾಸಿ ಮಹಿಳೆ, ತಾನು ಕಳೆದ ಮೂರು ವರ್ಷಗಳಿಂದ ಹುಡುಗನೊಂದಿಗೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿ ಇದ್ದೆ ಎಂದು ಹೇಳಿಕೊಂಡಿದ್ದಾಳೆ. ಇಬ್ಬರೂ ಭೋಪಾಲ್‌ನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.
ಆಕೆಯನ್ನು ಸಭಾಂಗಣದ ಗೇಟ್ ಹೊರಗೆ ನಿಲ್ಲಿಸಲಾಯಿತು ಮತ್ತು ಕಾವಲುಗಾರರು ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದರು. ಅವಳನ್ನು ಕರೆದೊಯ್ಯುವ ಪೊಲೀಸರು ಬರುವವರೆಗೂ ಅವಳು ಕಿರುಚಾಟವನ್ನು ಮುಂದುವರಿಸಿದಳು. ಅವಳು ಹುಡುಗನನ್ನು ಭೇಟಿಯಾಗಲು ಸಹ ಸಾಧ್ಯವಾಗಲಿಲ್ಲ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ನೆಟಿಜನ್‌ಗಳು ಈ ಹುಡುಗಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ.ಜೊತೆಗೆ ಲಿವ್‌ ಇನ್‌ ರಿಲೇಶನ್‌ಶಿಪ್‌ ಅನಾಹುತದ ಬಗ್ಗೆಯೂ..

ಪ್ರಮುಖ ಸುದ್ದಿ :-   ಮನೆ ಮುಂದೆಯೇ ಗುಂಡು ಹಾರಿಸಿ ಬಿಜೆಪಿ ನಾಯಕ-ಖ್ಯಾತ ಉದ್ಯಮಿ ಗೋಪಾಲ ಖೇಮ್ಕಾ ಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement