ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಪರೀಕ್ಷೆಗೆ ಹೋಗುವ ಮುನ್ನ ಈ ಅಂಶಗಳನ್ನು ನೆನಪಲ್ಲಿಡಿ

posted in: ರಾಜ್ಯ | 0

ಬೆಂಗಳೂರು: ಕೊರೊನಾ ೩ನೇ ಅಲೆ ಭೀತಿ ನಡುವೆಯೇ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಜು.೧೯ ಮತ್ತು ೨೨ ರಂದು ೧೦ನೇ ತರಗತಿ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.

ಜು.೧೯ರಂದು ಕೋರ್ ವಿಷಯ ಅಂದರೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಜು.೨೨ರಂದು ಭಾಷಾ ವಿಷಯ ಅಂದರೆ ಕನ್ನಡ, ಇಂಗ್ಲಿಷ್, ಹಿಂದಿ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.

ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆ ವಿಭಿನ್ನ ರೀತಿಯಾಗಿ ನಡೆಯಲಿದೆ. ಪ್ರಶ್ನೆಪತ್ರಿಕೆ ಮಾದರಿ ಬೇರೆ ರೀತಿಯಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ೧೦ನೇ ತರಗತಿ ಪರೀಕ್ಷೆ ನಡೆಸಲಾಗುತ್ತಿದ್ದು, ಬಹು ಆಯ್ಕೆ ಪ್ರಶ್ನೆಗಳ ಪ್ರಶ್ನೆಪತ್ರಿಕೆ ಹಾಗೂ ಒಎಮ್‌ಆರ್ ಶೀಟ್ ನೀಡಲಾಗುತ್ತದೆ. ವಿದ್ಯಾರ್ಥಿಗಳು ತುಂಬಾ ಜಾಗರೂಕತೆಯಿಂದ ಒ.ಎಮ್.ಆರ್. ಶೀಟನ್ನು ತುಂಬಬೇಕು.

ಒ.ಎಮ್.ಆರ್. ಶೀಟನ್ನು ಭರ್ತಿ ಮಾಡುವಾಗ ಸ್ವಲ್ಪ ತಪ್ಪಾದರೂ ಸಹ ಅದಕ್ಕೆ ಅಂಕ ಕೊಡಲ್ಲ. ಒ.ಎಮ್.ಆರ್. ಶೀಟನ್ನು ಕಂಪ್ಯೂಟರನಲ್ಲಿ ಸ್ಕ್ಯಾನ್ ಮಾಡಿ ಮೌಲ್ಯಮಾಪನ ಮಾಡಲಾಗುತ್ತದೆ. ಹೀಗಾಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಒ.ಎಮ್.ಆರ್. ಶೀಟನಲ್ಲಿ ಕೊಟ್ಟಿರುವ ಬಹುಆಯ್ಕೆಯ ಉತ್ತರದ ವೃತ್ತವನ್ನು ಪೆನ್ನಿನಿಂದ ತುಂಬಬೇಕು.

ಪರೀಕ್ಷೆಗೆ ಇನ್ನೂ ಒಂದು ವಾರ ಇರುವಾಗಲೇ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮಾದರಿ ಪ್ರಶ್ನೆ ಪತ್ರಿಕೆ ಜೊತೆಗೆ ಒ.ಎಮ್.ಆರ್. ಶೀಟನ್ನು ಬಿಡುಗಡೆ ಮಾಡಿದೆ. ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಜು. ೧೯ ರಂದು ಸೋಮವಾರ ಪರೀಕ್ಷೆ ನಡೆಯಲಿದೆ. ಒಂದು ವಿಷಯಕ್ಕೆ ನಲವತ್ತು ಪ್ರಶ್ನೆಗಳಿದ್ದು, ಒಟ್ಟು ಮೂರು ವಿಷಯಗಳಿಗೆ ತಲಾ ೪೦ ಪ್ರಶ್ನೆಗಳಿರುತ್ತವೆ. ಮೂರು ವಿಷಯ ಆಧಾರಿತ ಒಟ್ಟು ೧೨೦ ಪ್ರಶ್ನೆಗಳಿಗೆ ಅನುಗುಣವಾಗಿ ಪ್ರತ್ಯೇಕ ಮೂರು ಒ.ಎಂ.ಆರ್. ಶೀಟಗಳನ್ನು ನೀಡಲಾಗುತ್ತದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

೩ ವಿಷಯಕ್ಕೆ ಅನುಗುಣವಾಗಿ ಬಣ್ಣ ನೀಡಲಾಗಿದೆ. ಗಣಿತ ವಿಷಯಕ್ಕೆ ಗುಲಾಬಿ, ವಿಜ್ಞಾನ ವಿಷಯಕ್ಕೆ ಕೇಸರಿ, ಸಮಾಜ ವಿಜ್ಞಾನಕ್ಕೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ. ಭಾಷಾ ವಿಷಯಗಳಲ್ಲಿ ಪ್ರಥಮ ಭಾಷೆಗೆ ಗುಲಾಬಿ ಬಣ್ಣ, ದ್ವಿತೀಯ ಭಾಷೆಗೆ ಕೇಸರಿ, ತೃತೀಯ ಭಾಷೆಗೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ. ಬಣ್ಣವನ್ನು ಆಧರಿಸಿ ಒಎಂಆರ್ ಶೀಟನ್ನು ಮುದ್ರಿಸಲಾಗಿದೆ. ಮೂರು ವಿಷಯಗಳಿಗೆ ಮೂರು ಒಎಂಆರ್ ಶೀಟ್ ನೀಡಲಾಗುತ್ತದೆ.

ಒಎಂಆರ್ ಶೀಟನ್ನು ವಿದ್ಯಾರ್ಥಿಗಳು ಜೋಪಾನವಾಗಿ ಬಳಸಬೇಕು. ಯಾವುದೇ ಕಾರಣಕ್ಕೂ ಒಎಂಆರ್ ಶೀಟಗೆ ಒಂದು ಪಿನ್ ಸಹ ಚುಚ್ಚಬಾರದು. ಅಪ್ಪಿ ತಪ್ಪಿಯೂ ಒಎಂಆರ್ ಶೀಟ್ ಹರಿಯಬಾರದು. ಒಎಂಆರ್ ಶೀಟನಲ್ಲಿ ಕೊಟ್ಟಿರುವ ಬಹು ಆಯ್ಕೆಯ ಉತ್ತರದ ವೃತ್ತವನ್ನು ತುಂಬುವಾಗಲೂ ಎಚ್ಚರಿಕೆಯಿಂದ ತುಂಬೇಕು. ಒಂದೇ ಪ್ರಶ್ನೆಗೆ ಯಾವುದೇ ಕಾರಣಕ್ಕೂ ಎರಡು ಆಯ್ಕೆಗಳಿಗೆ ತುಂಬಬಾರದು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚಿರುವ ರೀತಿ ಯಾವುದೇ ಕಾರಣಕ್ಕೂ ವೈಟನರ್ ಅನ್ನು ಬಳಸಬಾರದು. ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಗೈರು ಹಾಜರಾತಿ (ಎಬಿ) ವೃತ್ತವನ್ನು ಅಪ್ಪಿ ತಪ್ಪಿಯೂ ತುಂಬಬಾರದು.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

ಈ ಮೇಲೆ ಹೇಳಿರುವ ವಿಷಯದಲ್ಲಿ ಒಂದು ತಪ್ಪಾದರೂ ವಿದ್ಯಾರ್ಥಿಯ ಫಲಿತಾಂಶದಲ್ಲಿ ಏರು ಪೇರಾಗಲಿದೆ. ವಿದ್ಯಾರ್ಥಿಯ ಫಲಿತಾಂಶ ಪ್ರಕಟಗೊಳ್ಳುವುದಕ್ಕೆ ಅಡಚಣೆಯಾಗಲಿದೆ.

ಪ್ರತಿ ವಿಷಯಕ್ಕೆ ಒಂದು ಪ್ರತ್ಯೇಕ ಒಎಂಆರ್ ಶೀಟ್ ನೀಡಲಾಗುತ್ತದೆ. ಇದರಲ್ಲಿ ಪ್ರಶ್ನೆ ಪತ್ರಿಕೆ ವಿಷಯ, ಪರೀಕ್ಷಾ ಕೇಂದ್ರದ ವಿವರ, ವಿದ್ಯಾರ್ಥಿಯ ವಿವರ ಮತ್ತು ಭಾವಚಿತ್ರ ವಿವರ ನೀಡಲಾಗಿದೆ. ಒಎಂಆರ್ ಶೀಟ್ನಲ್ಲಿ ಆಕಸ್ಮಿಕವಾಗಿ ವಿದ್ಯಾರ್ಥಿಯ ಭಾವಚಿತ್ರ ಪ್ರಕಟವಾಗದಿದ್ದರೆ, ವಿದ್ಯಾರ್ಥಿಯಿಂದ ಭಾವಚಿತ್ರ ಸಂಗ್ರಹಿಸಿ ಪರೀಕ್ಷೆ ಪರಿವೀಕ್ಷಕರು ಅಂಟಿಸಿ ಅದರ ಮೇಲೆ ವಿದ್ಯಾರ್ಥಿಯ ಸಹಿ ಪಡೆಯಬೇಕು. ಫೋಟೊವನ್ನು ಇಟ್ಟು ಯಾವುದೇ ಕಾರಣಕ್ಕೂ ಪಿನ್ ಒಡೆಯಬಾರದು.

ಒಎಂಆರ್ ಶೀಟನಲ್ಲಿ ಕೊಟ್ಟಿರುವ ಉತ್ತರ ಆಯ್ಕೆಯ ವೃತ್ತವನ್ನು ಕಪ್ಪು ಮತ್ತು ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನಿಂದ ತುಂಬಬೇಕು. ಒಂದು ಪ್ರಶ್ನೆಗೆ ನಾಲ್ಕು ಆಯ್ಕೆ ಉತ್ತರ ಆಯ್ಕೆ ನೀಡಿದ್ದು, ಅದರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಬೇಕು. ಒಂದೇ ಪ್ರಶ್ನೆಗೆ ಎರಡು ಉತ್ತರ ಆಯ್ಕೆ ಮಾಡಿದರೆ, ಸರಿ ಉತ್ತರವಿದ್ದರೂ ಅದನ್ನು ಪರಿಗಣಿಸಲು ಅವಕಾಶವಿರುವುದಿಲ್ಲ. ಈ ಶೀಟನ್ನು ತುಂಬಾ ಎಚ್ಚರಿಕೆಯಿಂದ ತುಂಬಬೇಕಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿರಬೇಕು.

2 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement