ಕುಮಟಾ: ಮಳೆಗೆ ಧರೆಗುರುಳಿದ ಎರಡು ಶತಮಾನದ ಹಿಂದಿನ ಬೃಹತ್‌ ಅಶ್ವತ್ಥ ಮರ

ಕುಮಟಾ: ಉತ್ತರ ಕನ್ನಡ ಜಿಲ್ಲೆಯಾದ್ಯಮತ ಸೋಮವಾರ ರಾತ್ರಿಯಿಂದ ಜೋರಾದ ಮಳೆ ಮುಂದುವರಿದಿದೆ. ಗಾಳಿ ಹಾಗೂ ಮಳೆಯಿಂದಾಗಿ ಕುಮಟಾದ ಐ.ಸಿ.ಐ.ಸಿ ಬ್ಯಾಂಕ್ ಪಕ್ಕದ ಬೃಹತ್ ಆಲದ ಮರ ಮಂಗಳವಾರ ಬೆಳಗಿನ ಜಾವ ಧರೆಗುರುಳಿದೆ.
ಬೃಹತ್‌ ಮರ ಉರುಳಿದ್ದರಿಂದ ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಬೆಳಗಿನ ಜಾವ ಮರ ಬಿದ್ದ ಕಾರಣ, ಜನರಿಗೆ ಹಾಗೂ ಯಾವುದೇ ವಾಹನಗಳಿಗೂ ಹಾನಿಯಾಗಿಲ್ಲ. ನಂತರ ಪುರಸಭೆ ನೌಕರರು, ಅಗ್ನಿ ಶಾಮಕದಳದ ಸಿಬ್ಬಂದಿ ಮರವನ್ನು ತೆರವು ಮಾಡಿದರು.
ಈ ಅಶ್ವತ್ಥ ಮರ ಸುಮಾರು ಎರಡು ಶತಮಾನಕ್ಕಿಂತ ಹಳೆದು ಎಂದು ಹೇಳಲಾಗಿದೆ.
ಸೋಮವಾರದಿಂದ ಅರಬ್ಬಿ ಸಮುದ್ರ ಮತ್ತಷ್ಟು ಪ್ರಕ್ಷುಬ್ಧಗೊಂಡಿದ್ದು, ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಕಾರವಾರದ ದೇವಭಾಗ, ರವೀಂದ್ರನಾಥ ಟ್ಯಾಗೋರ್ ಕಡಲತೀರ, ಹೊನ್ನಾವರದ ವಿವಿಧೆಡೆ ಕಡಲ್ಕೊರೆತ ತೀವ್ರಗೊಂಡಿದೆ.
ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ಶಿರಸಿ, ಯಲ್ಲಾಪುರ, ಸಿದ್ದಾಪುರ ಮುಂತಾದೆಡೆ ಮಳೆ ಮುಂದುವರಿದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement