ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರವು 2020ನೇ ಸಾಲಿನ ಪುಸ್ತಕ ಸೊಗಸು/ಮುದ್ರಣ ಸೊಗಸು ಬಹುಮಾನಗಳನ್ನು ಘೋಷಿಸಿದೆ. ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಬಹುಮಾನಿತರ ವಿವರ ಈ ಕೆಳಗಿನಂತಿದೆ.
ಭವತಾರಿಣಿ ಪ್ರಕಾಶನ ಬೆಂಗಳೂರು, ಡಾ.ಎಸ್.ಗುರುಮೂರ್ತಿ ಅವರ ಸಮಗ್ರ ಅವಲೋಕನ ‘ಕದಂಬರು’ ಕೃತಿಗೆ ಪುಸ್ತಕ ಸೊಗಸು ಮೊದಲನೇ ಬಹುಮಾನ ರೂ. 25,000. ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಪ್ರತಿಷ್ಠಾನ ರಾಯಚೂರು, ಸಂ:ಡಾ.ಅಮರೇಶ ಯತಗಲ್ ಅವರ ‘ಸಾರ್ಥಕ ಬದುಕು’ ಕೃತಿಗೆ ಪುಸ್ತಕ ಸೊಗಸು ಎರಡನೇ ಬಹುಮಾನ ರೂ. 20,000. ಪ್ರಕಾಶನ ಸಂಸ್ಥೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ‘ಕಲಾಸಂಚಯ’ ಕೃತಿಗೆ ಪುಸ್ತಕ ಸೊಗಸು ಮೂರನೇ ಬಹುಮಾನ ರೂ. 10,000. ಗೋಮಿನಿ ಪ್ರಕಾಶನ ತುಮಕೂರು ಜಿಲ್ಲೆ, ತಮ್ಮಣ್ಣ ಬೀಗಾರ ಅವರ ‘ಫ್ರಾಗಿ ಮತ್ತು ಗೆಳೆಯರು’ ಕೃತಿಗೆ ಮಕ್ಕಳ ಪುಸ್ತಕ ಸೊಗಸು ಬಹುಮಾನ ರೂ. 8,000 ದೊರೆತಿದೆ.
ಲಕ್ಷ್ಮೀಕಾಂತ ಮಿರಜಕರ ಅವರ ‘ಬಯಲೊಳಗೆ ಬಯಲಾಗಿ’ ಕೃತಿಗೆ ಮಾಡಿದ ಮುಖಪುಟ ಚಿತ್ರವಿನ್ಯಾಸಕ್ಕಾಗಿ ಕಲಾವಿದ ಟಿ.ಎಫ್ ಹಾದಿಮನಿ ಅವರಿಗೆ ರೂ. 10,000 ಬಹುಮಾನ ದೊರೆತಿದೆ. ಸಂ: ರೂಪ ಹಾಸನ ಅವರ ಹೆಣ್ಣೊಳನೋಟ ಕೃತಿಯ ಮುಖಪುಟ ಕಲಾವಿನ್ಯಾಸಕ್ಕೆ ರೂ.8,000. ರೀಗಲ್ ಪ್ರಿಂಟ್ ಸರ್ವೀಸ್ ಬೆಂಗಳೂರು, ಕಿರಣ್ ಭಟ್ ಅವರ ರಂಗಕೈರಳಿ ಕೃತಿಗೆ ಪುಸ್ತಕ ಮುದ್ರಣ ಸೊಗಸು ಬಹುಮಾನ ರೂ. 5,000 ಲಭಿಸಿದೆ. ಈ ಪ್ರಕಾರ ಬಹುಮಾನಿತರನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ