ಇಂದಿನಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಆರಂಭಿಸಲು ಆದೇಶ

ಬೆಂಗಳೂರು :ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 15ರಿಂದ ಶೈಕ್ಷಣಿಕ ವರ್ಷವು ಆರಂಭವಾಗಲಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳನ್ನು ಆರಂಭಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯೂ ಆದೇಶಿಸಿದೆ.
ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದು, ದಿನಾಂಕ 15-07-2021ರಿಂದ ದ್ವಿತೀಯ ಪಿಯುಸಿಗೆ ಶೈಕ್ಷಣಿಕ ವರ್ಷವು ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಪಾಠಗಳನ್ನು ಆರಂಭಿಸಬೇಕಾಗಿದೆ. ಭೌತಿಕ ತರಗತಿಗಳು ಆರಂಭವಾಗುವ ಬಗ್ಗೆ ಇನ್ನೂ ನಿರ್ಧಾರವಾಗದ ಕಾರಣ, ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಾಠಗಳನ್ನು ಆನ್ ಲೈನ್ ನಲ್ಲಿ ಆರಂಭಿಸಬೇಕು ಎಂದು ತಿಳಿಸಲಾಗಿದೆ..
ಕಳೆದ ಸಾಲಿನಲ್ಲಿ ಪ್ರೀ-ರೆಕಾರ್ಡೆಡ್, ಯೂಟ್ಯೂಬ್ ತರಗತಿಗಳನ್ನು ನಡೆಸಿದ ಕಾರಣ, ಪ್ರತಿ ದಿನ ಲಿಂಕ್ ಗಳನ್ನು ಕಳುಹಿಸಲಾಗುತ್ತಿದ್ದು. ಆ ಲಿಂಕ್ ಗಳನ್ನು ವಿದ್ಯಾರ್ಥಿಗಳಿಗೆ ಪ್ರತಿ ಉಪನ್ಯಾಸಕರು ತಾವು ರಚಿಸಿಕೊಂಡು ವಿಷಯವಾರು ವಾಟ್ಸ್ ಆಪ್ ಗ್ರೂಪ್ ಗೆ ಕಳುಹಸಲಾಗುತ್ತಿತ್ತು.
ಈ ಬಾರಿ ಪ್ರತಿ ಕಾಲೇಜಿನ ಉಪನ್ಯಾಸಕರೇ, ಅವರ ವಿದ್ಯಾರ್ಥಿಗಳಿಗೆ ಎಂ ಎಸ್ ಟೀಂ, ಗೂಗಲ್ ಮೀಟ್, ಜೂಮ್ ಅಥವಾ ಜಿಯೋ ಮೀಟ್ ಗಳನ್ನು ಉಪಯೋಗಿಸಿಕೊಂಡು ಪಾಠಗಳನ್ನು ಆರಂಭಿಸಲು ತಿಳಿಸಲಾಗಿದೆ. ಈ ಸಂಬಂಧ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಲ್ಲಿರುವಂತೆ ಎಲ್ಲಾ ತರಗತಿಗಳಿಗೆ ಅನ್ವಯವಾಗುವಂತೆ, ಈ ಕೆಳಕಂಡಂತೆ ವೇಳಾಪಟ್ಟಿಯನ್ನು ರಚಿಸಬೇಕು.
ಬೆಳಿಗ್ಗೆ 10 ರಿಂದ 11ರ ವರೆಗೆ ಒಂದೇ ಅವಧಿ 11 ರಿಂದ 12 ರ ವರೆಗೆ 2ನೇ ಅವಧಿ, ಮಧ್ಯಾಹ್ನ 12 ರಿಂದ 12.30ರವರೆಗೆ ವಿರಾಮ
12.30ರಿಂದ 1.30ರ ವರೆಗೆ 3ನೇ ಅವಧಿ, 1.30 ರಿಂದ 2.30ರ ವರೆಗೆ 4ನೇ ಅವಧಿ
ಈ ವೇಳಾಪಟ್ಟಿಗನುಗುಣವಾಗಿ ತರಗತಿಗಳನ್ನು ಸೂಕ್ತ ಲಿಂಕ್ ಗಳನ್ನು ಜೆನರೇಟ್ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಕಳುಹಿಸಿ, ತರಗತಿ ನಡೆಸಲು ಸೂಚಿಸಲಾಗಿದೆ. ಈ ಸಂಬಂಧ ಎಲ್ಲ ಉಪನ್ಯಾಸಕರು ಕಡ್ಡಾಯವಾಗಿ ಪಾಠಗಳನ್ನು ನಡೆಸಿ, ಹಾಜರಾತಿಯನ್ನು ತೆಗೆದುಕೊಂಡು, ಪ್ರಾಂಶುಪಾಲರಿಗೆ ಪ್ರತಿದಿನ ಹಾಜರಾತಿ ವಹಿಯನ್ನು ಕಳುಹಿಸುವುದು.
ಯಾವುದೇ ಕಾಲೇಜಿನಲ್ಲಿ ಉಪನ್ಯಾಸಕರು ಇಲ್ಲದಿದ್ದ ಪಕ್ಷದಲ್ಲಿ ಉಪನ್ಯಾಸಕರಿಗೆ ಸರಿಹೊಂದಿಸುವುದು ಹಾಗೂ ತರಗತಿಗಳನ್ನು ನಡೆಸುವ ಜವಾಬ್ದಾರಿಯನ್ನು ನೀಡುವುದು. ಆಯಾ ಜಿಲ್ಲೆಯ ಉಪನಿರ್ದೇಶಕರು ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗುವ ಬಗ್ಗೆ ವಿವರವನ್ನು ಪಡೆದುಕೊಳ್ಳುವುದು.
ಸದ್ಯದ ಪರಿಸ್ಥಿತಿಯಲ್ಲಿ ಈಗಾಗಲೇ ತುಂಬಾ ದಿನಗಳಿಂದ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ನಡೆದಿರುವುದಿಲ್ಲ. ಆದ್ದರಿಂದ ತುರ್ತಾಗಿ ಈ ಕಾರ್ಯವಾಗಬೇಕಾಗಿದೆ. 07-07-2021ರಿಂದಲೇ ಉಪನ್ಯಾಸಕರು ಕಡ್ಡಾಯವಾಗಿ ಕಾಲೇಜುಗಳಿಗೆ ಹಾಜರಾಗುತ್ತಿರುವ ಕಾರಣ, ತಮ್ಮ ಕಾಲೇಜುಗಳಿಂದಲೇ ಪಾಠಪ್ರವಚನಗಳನ್ನು ನಡೆಸಬೇಕು ಎಂಬುದಾಗಿ ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement