ಜಿಪಂ-ತಾಪಂ ಚುನಾವಣೆ ಡಿಸೆಂಬರ್ ವರೆಗೆ ಮುಂದೂಡಲು ರಾಜ್ಯ ಸಂಪುಟ ಸಭೆ ನಿರ್ಧಾರ

posted in: ರಾಜ್ಯ | 0

ಬೆಂಗಳೂರು: ರಾಜ್ಯ ಸರಕಾರ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನು ಡಿಸೆಂಬರ್ ವರೆಗೆ ಮುಂದೂಡುವ ನಿರ್ಣಯವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿತ್ತು.    ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳನ್ನು  ಡಿಸೆಂಬರ್ ವರೆಗೆ ಮುಂದೂಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ. ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಇದು ಬಿಗ್ ಶಾಕ್ ನೀಡಿದಂತಾಗಿದೆ.

ಅಧಿವೇಶನ ನಡೆಸುವ ಬಗ್ಗೆ ಮುಂದೆ ಚರ್ಚೆ ನಡೆಸಲಾಗುವುದು ಅಧಿವೇಶನಕ್ಕೆ ಅನುದಾನ ಸಿಗುತ್ತಿಲ್ಲವೆಂಬ ಆರೋಪ ಸರಿಯಲ್ಲ. ನಾವು ಸಂಪುಟದಲ್ಲಿ ಹಣ ಬಿಡುಗಡೆ ಮಾಡುತ್ತೇವೆ. ಹಣಕಾಸು ಇಲಾಖೆ ಅಪ್ರೂವಲ್ ನೀಡುತ್ತದೆ. ಆರ್ಥಿಕ ಸಮಸ್ಯೆ ಉದ್ಬವಿಸಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 

ಸಂಪುಟ ಸಭೆಯ ನಿರ್ಣಯಗಳು:

  • ಗದಗ ಪಶುವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ೫೦ ಕೋಟಿಗೆ ಹೆಚ್ಚುವರಿ ೩೦ ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ.
  • ಬೆಳೆ ಸರ್ವೆಗೆ ಹೊಸ ಆಪ್ ರಚನೆಗೆ ಒಪ್ಪಿಗೆ.
  • ಇನ್ವೆಸ್ಟ್ ಕರ್ನಾಟಕ ೨೨-೨೨ ಮಾಡಲು ಒಪ್ಪಿಗೆ ನೀಡಲಾಗಿದ್ದು, ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಫೆಬ್ರವರಿ ೯ ರಿಂದ ೧೨ರವರೆಗೆ ಮೂರು ದಿನ ಮಾಡಲು ನಿರ್ಧಾರ.
  • ರಾಣೆಬೆನ್ನೂರಿನಲ್ಲಿ ೧೮ ಕೆರೆ ನೀರು ತುಂಬುವ ಯೋಜನೆಗಾಗಿ ೨೦೬ ಕೋಟಿ ರೂ. ನೀಡಲು ಒಪ್ಪಿಗೆ.
  • ಕೊಪ್ಪಳದ ೫ ಕೆರೆಗಳಿಗೆ ನೀರು ಪೂರೈಕೆಗೆ ಯೋಜನೆಗಾಗಿ ೯೫ ಕೋಟಿ ಅನುದಾನ ನೀಡಲು ಒಪ್ಪಿಗೆ.
  • ಆಕ್ಸಿಜನ್ ಉತ್ಪಾದನೆ ಘಟಕ ನಿರ್ಮಾಣಕ್ಕೆ ಅನುಮೋದಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ೯ ಘಟಕಗಳು ಇವೆ. ೮೦೦ ಮೆಟ್ರಿಕ್ ಟನ್ ಕೆಪ್ಯಾಸಿಟಿ ಇದೆ. ಇದನ್ನು ಹೆಚ್ಚಿಸುವ ಬಗ್ಗೆ ಸಂಪುಟ ನಿರ್ಧರಿಸಲಾಗಿದೆ.
  • ಉತ್ತಮ ನಡವಳಿಕೆ ತೋರಿದ ೧೩೯ ಖೈದಿಗಳಿಗೆ ಬಿಡುಗಡೆ ಭಾಗ್ಯ ನೀಡಲಾಗಿದ್ದು, ಸ್ವಾತಂತ್ರ್ಯ ದಿನಾಚರಣೆಯ ದಿನ ೧೩೯ ಖೈದಿಗಳನ್ನು ಬಿಡುಗಡೆಗೊಳಿಸಲಾಗುವುದು.
  • ಕಂದಾಯ ಇಲಾಖೆಯಲ್ಲಿ ಬಡ್ತಿ ನಿಯಮ ಸಡಿಲಿಕೆ ಮಾಡುವ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದು, ೩,೦೫೦ ಎಸ್.ಡಿ.ಎ. ಫೋಸ್ಟ್ ಹಾಗೂ ೨,೪೫೪ ಎಫ್.ಡಿ.ಎ. ಫೋಸ್ಟ್‌ಗಳಿಗೆ ಕಂಬೈನ್ಡ್ ಆಗಿ ಬಡ್ತಿ ನೀಡಲಾಗುವುದು.
  • ಜರ್ಮನ್ ಟೆಕ್ನಾಲಜಿಯಡಿ ತರಬೇತಿ ನೀಡಲು ಮಂಗಳೂರು, ಬೆಳಗಾವಿಯಲ್ಲಿ ಟೆಕ್ನಾಲಜಿ ಕಟ್ಟಡ ನಿರ್ಮಾಣಕ್ಕೆ ಅನುಮತಿ.
  • ಶೇ.೨೫ ಕ್ಯಾಪಿಟಲ್ ಸಬ್ಸಿಡಿಯನ್ನು ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಆಕ್ಸಿಜನ್ ಘಟಕ ಸ್ಥಾಪನೆ ಮಾಡಲು ಮುಂದೆ ಬಂದವರಿಗೆ ನೀಡಲಾಗುವುದು. ಮೂರು ವರ್ಷ ವಿದ್ಯುತ್ ಬಿಲ್ ವಿನಾಯ್ತಿ ನೀಡಲಾಗುವುದು. ಮೆಟ್ರಿಕ್ ಟನ್ ಗೆ ೧೦೦೦ ರೂ. ಫವರ ಟಾರಿಪ್ ನೀಡಲಾಗುವುದು.
  • ಆಕ್ಸಿಜನ್ ಘಟಕ ಸ್ಥಾಪನೆ ಮಾಡುವವರಿಗೆ ಭೂಮಿಯ ರಿಜಿಸ್ಟ್ರೇಶನ್ ವಿನಾಯ್ತಿ ನೀಡಲಾಗುವುದು.
  • ಜಾಬ್ ಓರಿಯಂಟ್ ಕೋರ್ಸ್ ಬೇಡಿಕೆ ಇತ್ತು. ಜೆಒಸಿಯನ್ನು ಪಿಯುಸಿಗೆ ತತ್ಸಮಾನವಾಗಿ ನೀಡಲಾಗುತ್ತದೆ.
  • ದೇವದುರ್ಗದಲ್ಲಿ ಎಂಜಿಜಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ೫೮ ಕೋಟಿ ರೂ. ಅನುದಾನ.
  • ಸಿರಗುಪ್ಪ ನಗರಕ್ಕೆ ನೀರು ಪೂರೈಕೆಗೆ ಯೋಜನೆಗಾಗಿ ೪೫.೪೬ ಲಕ್ಷ ಅನುದಾನ ಬಿಡುಗಡೆ.
ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

 

 

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement