ತಮಿಳುನಾಡು: ಬಾಲಕಿಯ ಪ್ರಾಣ ಉಳಿಸಲು ಹೋದ ಐವರ ದುರ್ಮರಣ

ಚೆನ್ನೈ:ದೇವಸ್ಥಾನದ ಕೊಳದಲ್ಲಿ ಮುಳುಗುತ್ತಿದ್ದ ಬಾಲಕಿಯ ರಕ್ಷಣೆಗೆ ತೆರಳಿದ್ದ ಐದು ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ಪುಧು ಗುಮ್ಮಿಡಿಪುಂಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಅಂಗಲಮ್ಮನ್‌ ದೇವಸ್ಥಾನದ ಕೊಳದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮವೇ ದುಃಖದಲ್ಲಿ ಮುಳುಗಿದೆ.
ಮೃತರನ್ನು ನರ್ಮದಾ (12 ವರ್ಷ), ಜೀವಿತಾ (14 ವರ್ಷ ), ಅಶ್ಮಿತಾ (14 ವರ್ಷ ), ತಾಯಿ ಸುಮತಿ ( 38 ವರ್ಷ ) ಮತ್ತು ಜೋತಿ (30 ವರ್ಷ) ಎಂಬವರು ಗುರುತಿಸಲಾಗಿದೆ.
ದೇವಸ್ಥಾನದ ಕೊಳದಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆಯಲ್ಲಿ ಮಕ್ಕಳು ಕೊಳದಲ್ಲಿ ನೀರಾಟವಾಡುತ್ತಿದ್ದರು. ಈ ವೇಳೆಯಲ್ಲಿ ನರ್ಮದಾ ಕೊಳದಲ್ಲಿನ ಕೆಸರಿನಲ್ಲಿ ಬಾಲಕಿ ಸಿಲುಕಿಕೊಂಡಿದ್ದಾಳೆ. ಈ ವೇಳೆಯಲ್ಲಿ ರಕ್ಷಣೆಗೆ ಇಳಿದ ಜೀವಿತಾ ಹಾಗೂ ಅಶ್ಮಿತಾ ಅವರು ಸಹ ನೀರಿನಲ್ಲಿ ಮುಳುಗಿದ್ದಾರೆ. ಅಲ್ಲೇ ಇದ್ದ ಅಶ್ಮಿತಾ ತಾಯಿ ನೀರಿಗೆ ಇಳಿದು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಜ್ಯೋತಿ ಎಂಬ ಇನ್ನೋರ್ವ ಮಹಿಳೆಯೂ ಕೊಳಕ್ಕೆ ಇಳಿದಿದ್ದಾರೆ.
ಆದರೆ ಕೊಳದಲ್ಲಿನ ಕೆಸರಿನಲ್ಲಿ ಸಿಲುಕಿ ಐದು ಮಂದಿಯೂ ಮೃತಪಟ್ಟಿದ್ದಾರೆ. ವಿಷಯ ಗೊತ್ತಾಗಿ ಗ್ರಾಮಸ್ಥರು ಕೊಳದ ಬಳಿಗೆ ಬರುವ ಹೊತ್ತಿಗೆ ಎಲ್ಲರೂ ಮೃತರಾಗಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಎಲ್ಲಾ ಶವಗಳನ್ನು ಹೊರತೆಗೆದಿದ್ದು, ಶವಗಳನ್ನು ಪೊನ್ನೆರಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ. ಸಿಪ್ಕಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಗ್ರಾಮದದಲ್ಲಿ ಸ್ಮಶಾನ ಮೌನ ಆವರಿಸಿದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement