ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪೈಲಟ್ ತರಬೇತಿ ಕೇಂದ್ರ ಸ್ಧಾಪನೆಗೆ ಒಪ್ಪಂದ

posted in: ರಾಜ್ಯ | 0

ಕಲಬುರಗಿ: ಹೈದರಾಬಾದ್ ಮೂಲದ ಏಷ್ಯಾ ಪೆಸಿಫಿಕ್ ಫ್ಲೈಟ್ ಟ್ರೈನಿಂಗ್ (ಎಪಿಎಫ್‌ಟಿ) ಕರ್ನಾಟಕದ ಕಲಬುರಗಿ ವಿಮಾನ ನಿಲ್ದಾಣದಲ್ಲಿ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದೆ.

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅನುಮೋದಿತ ವಾಯುಯಾನ ಅಕಾಡೆಮಿಯು ಇತ್ತೀಚೆಗೆ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಯೊಂದಿಗೆ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ವರ್ಗಾವಣೆ (ಡಿಬಿಒಎಂಟಿ) ಕುರಿತು ವಿಮಾನ ತರಬೇತಿ ಸಂಸ್ಥೆ  ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದೆ.

೨೫ ವರ್ಷಗಳ ಒಪ್ಪಂದದ ಕರಾರು ಪತ್ರಕ್ಕೆ ಎಪಿಎಫ್.ಟಿ ಸಿಇಒ ಡಿಪಿ ಹೇಮಂತ್ ಮತ್ತು ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರ್ ರಾವ್ ಸಹಿ ಮಾಡಿದ್ದಾರೆ.

೨೦೨೫ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಸುಶಿಕ್ಷಿತ ಪೈಲಟ್‌ಗಳ ಅವಶ್ಯಕತೆಯಿದೆ. ೨೦೨೪-೨೫ರ ವೇಳೆಗೆ ಭಾರತಕ್ಕೆ ೯೪೮೮ ಪೈಲಟ್‌ಗಳ ಅಗತ್ಯವಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪಸಿಂಗ್ ಪುರಿ ಅವರು ೨೦೨೦ರ ಸೆಪ್ಟೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ ಹೇಳಿದ್ದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement