ತಾಕತ್ತಿದ್ದರೆ ಆಡಿಯೋ ರಿಲೀಸ್ ಮಾಡಿ : ನಿರ್ದೇಶಕ ಇಂದ್ರಜೀತ್‌ ಲಂಕೇಶಗೆ ನಟ ದರ್ಶನ ಸವಾಲು

ಮೈಸೂರು : ನೀವು ಗಂಡಸೇ ಆಗಿದ್ರೆ, ನಿಮ್ಮ ಬಳಿಯಲ್ಲಿರುವ ನನ್ನ ಆಡಿಯೋವನ್ನು ಇಂದು ಬಿಡುಗಡೆ ಮಾಡಿ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶಗೆ ನಟ ದರ್ಶನ ತೂಗುದೀಪ್‌ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿರುವ ತಮ್ಮ ಫಾರ್ಮ್‌ ಹೌಸ್‌ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂದೇಶ ಹಾಗೂ ಇಂದ್ರಜಿತ್‌ ಅವರು ಮಾಡಿರುವ ಆಡಿಯೋ ನನ್ನದಲ್ಲ ಎಂದು ಸಂದೇಶ ಹೇಳಿದ್ದಾರೆ. ನನ್ನ ಆಡಿಯೋವೊಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಳಿ ಇದೆ ಎಂದು ಅವರು ಹೇಳಿದ್ದಾರೆ. ತಾಕತ್ತಿದ್ದರೆ ಅದನ್ನು ಅವರು ಬಿಡುಗಡೆ ಮಾಡಲಿ. ಅವರು ಬಿಡುಗಡೆ ಮಾಡಿದ ನಂತರ ಏನೇ ಬರಲೀ ನಾನು ಅದನ್ನು ಎದುರಿಸಲು ಸಿದ್ಧ. ಆಡಿಯೋ ವಿಚಾರದಲ್ಲಿ ನನ್ನ ತಪ್ಪು ಸಾಬೀತಾದರೆ ನಾನು ಜೈಲಿಗೆ ಹೋಗಲು ಸಿದ್ಧ. ಇಮದ್ರಜೀತ್‌ ಲಂಕೇಶ ಅವರಿಗೆ ನನ್ನ ಸವಾಲು ಎಂದು ವಾಗ್ದಾಳಿ ನಡೆಸಿದ್ದಾರೆ.
ಈವರೆಗೂ ನಾನು ಸುಮ್ಮನಿದ್ದೆ. 25 ಕೋಟಿ ರೂ.ಗಲ ವಂಚನೆ ಪ್ರಕರಣವನ್ನು ಬೇರೆಡೆ ಹೊರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ಮುಂದೆ ಈ ಕೇಸ್‌ ಎಲ್ಲಿಗೋ ಹೋಗುತ್ತದೆ ನೋಡುತ್ತೇನೆ ಎಂದು ಹೇಳಿದರು.
ನಾನು ಯಾವುದಾದ್ರೂ ಮರ್ಡರ್‌ ಮಾಡಿದ್ದೇನಾ. ಸಿನಿಮಾ ಮಾಡುವುದಾದರೆ ಬನ್ನಿ ಸಿನಿಮಾ ಮಾಡೋಣ. ಇದೆಲ್ಲ ಉಮಾಪತಿಯಿಂದಲೇ ಆಗುತ್ತಿರುವುದು. ನಾನು ಸಿನಿಮಾ ನಿರ್ದೇಶನ ಮಾಡಿದ್ದೇನೆ. ನಿಮಗ ಯೋಗ್ಯತೆ ಇದ್ದರೆ ಸಿನಿಮಾ ನಿರ್ದೇಶನ ಮಾಡಿ ಎಂದು ಇಂದ್ರಜಿತ್‌ ಲಂಕೇಶ್‌ ವಿರುದ್ಧ ಎಂದು ಕೆಂಡಕಾರಿದ್ದಾರೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement