ನಾಳೆ ಸಂಜೆ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

posted in: ರಾಜ್ಯ | 0

ಬೆಂಗಳೂರು: ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಪಾಸ್ ಮಾಡಿದ್ದ ಶಿಕ್ಷಣ ಇಲಾಖೆ ಜು.೨೦ರ ಸಂಜೆ ೪.೩೦ಕ್ಕೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ ಮಾಡಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಬಾರಿ ಗ್ರೇಡ್ ಬದಲಿಗೆ ಅಂಕಗಳ ಆಧಾರದ ಮೇಲೆ ಫಲಿತಾಂಶ ಹೊರಬೀಳಲಿದೆ. ಅಂಕ ಕೊಡಲು ಎಸ್.ಎಸ್.ಎಲ್.ಸಿ. ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿತ್ತು. ಅದರಂತೆ ಈಗ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಬಾರಿ ಯಾವುದೇ ರ‍್ಯಾಂಕ್ ಇಲ್ಲ. ಸಿಬಿಎಸ್‌ಇ ಮಾದರಿಯಲ್ಲಿ ಎಸ್.ಎಸ್.ಎಲ್.ಸಿ., ಪ್ರಥಮ ಪಿಯು ಅಂಕಗಳನ್ನು ಪರಿಗಣಿಸಿ ಫಲಿತಾಂಶ ನೀಡಲಾಗುತ್ತದೆ. ಗ್ರೇಡ್ ಬದಲು ಅಂಕಗಳ ಆಧಾರದಲ್ಲಿ ದ್ವಿತೀಯ ಪಿಯು ಫಲಿತಾಂಶವನ್ನು ಕೊಡಲಾಗುತ್ತದೆ. ಯಾವುದೇ ಗೊಂದಲಗಳಾಗದಂತೆ ಫಲಿತಾಂಶ ನೀಡಲು ಶಿಕ್ಷಣ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಪರೀಕ್ಷೆ ಇಲ್ಲದೇ ಫಲಿತಾಂಶ ಪ್ರಕಟಕ್ಕೆ ಪಿಯು ಬೋರ್ಡ್ ಸಿದ್ದತೆ ಮಾಡಿಕೊಂಡಿದೆ.

ಪಿಯು ಬೋರ್ಡ್ ಪ್ರತಿವರ್ಷ ಪರೀಕ್ಷೆಗೆ ಕೊಟ್ಟ ರಿಜಿಸ್ಟರ್ ನಂಬರ್ ಮೇಲೆ ಫಲಿತಾಂಶ ಸಿಗುತ್ತಿತ್ತು. ಅಂದರೆ ಪಿಯು ಬೋರ್ಡ್ ವೆಬ್ ಸೈಟ್ ಗೆ ಹೋಗಿ ವಿದ್ಯಾರ್ಥಿಯ ರಿಜಿಸ್ಟರ್ ನಂಬರ್ ಹಾಕಿದರೆ ಆಗ ಫಲಿತಾಂಶ ಸಿಗುತ್ತಿತ್ತು. ಆದರೆ ಈ ಬಾರಿ ಪರೀಕ್ಷೆಯೇ ನಡೆಸಿಲ್ಲವಾದ್ದರಿಂದ ರಿಜಿಸ್ಟರ್ ನಂಬರ್ ಸಿಕ್ಕಿಲ್ಲ.

ಪ್ರಮುಖ ಸುದ್ದಿ :-   ಏಪ್ರಿಲ್‌ 30 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಫಲಿತಾಂಶದ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸದಾಗಿ ರಿಜಿಸ್ಟರ್ ನಂಬರ್ ಜನರೇಟ್ ಮಾಡಲು ಪಿಯು ಬೋರ್ಡ್ ವ್ಯವಸ್ಥೆ ಮಾಡಿದೆ. ಅದರಂತೆ ಬೋರ್ಡ್ ನೀಡಿದ ರಿಜಿಸ್ಟರ್ ನಂಬರ್ (ನೌ ಮೈ ನಂಬರ್) ನ್ನು ಪಿಯು ವೆಬ್ ಸೈಟ್ ನಲ್ಲಿ ಹಾಕಿ ಆ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು. ವಿದ್ಯಾರ್ಥಿಗಳಿಗೆ ಎಸ್.ಎಂ.ಎಸ್. ಹಾಗೂ ಆಯಾ ಕಾಲೇಜಿಗೆ ಈ ಕುರಿತು ಫಲಿತಾಂಶದ ಮಾಹಿತಿ ನೀಡಲಾಗುತ್ತದೆ.

ಫಲಿತಾಂಶಕ್ಕೂ ಮುನ್ನ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರನ್ನು ಐಡೆಂಟಿಫೈ ಮಾಡಿಕೊಳ್ಳಬೇಕು. ಜನರೇಟ್ ಆದ ರಿಜಿಸ್ಟರ್ ನಂಬರ್ ಚೆಕ್ ಮಾಡಿ ಖಚಿತಪಡಿಸಿಕೊಳ್ಳಬೇಕು. ಆನಂತರ ಜು.೨೦ ರಂದು ಸಂಜೆ ೪.೩೦ರ ಬಳಿಕ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ವಿದ್ಯಾರ್ಥಿಗಳು ನೋಡಬಹುದು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement