ದ್ವಿತೀಯ ಪಿಯುಸಿ: ಡಾ.ಬಾಳಿಗಾ ವಾಣಿಜ್ಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಮಟಾ;ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪದವಿಪೂರ್ವ ವಿಭಾಗದ ೧೧೦ ವಿದ್ಯಾರ್ಥಿಗಳಲ್ಲಿ ೧೨ ಡಿಸ್ಟಿಂಗಶ್‌ನ್ ೬೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ೩೧ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣ ರಾಗಿದ್ದಾರೆ.
ಕಾರ್ತಿಕ ಹೆಗಡೆ ಸಾರಂಗ ಮತ್ತು ಚೇತನಾ ದತ್ತಾತ್ರಯ ಭಟ್ಟ ಎಲ್ಲ ವಿಷಯಗಳಲ್ಲಿಯೂ ನೂರೂ ಅಂಕ ಗಳಿಸಿ ೬೦೦ ಅಂಕ ಗಳಿಸಿದ್ದಾರೆ.ಪ್ರಜ್ಞಾ ಹೆಗಡೆ ೫೭೯ ಅಂಕ ಹಾಗೂ ಮಿಥುನ ನಾಯಕ ೫೭೪ ಅಂಕ ಗಳಿಸಿದ್ದಾರೆ.
ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಸುಶ್ರುತಾ ಹೊರ್‍ಟಾ ೬೦೦ ಅಂಕಗಳಿಸಿದ್ದಾರೆ.
ಕಾಲೇಜಿಗೆ ಕೀರ್ತಿತಂದ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಎನ್.ಜಿ.ಹೆಗಡೆ,ಪದವಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ಹಾಗೂ ಕಲಾ ಮತ್ತು ವಿಜ್ಞಾನ ವಿಭಾಗದ ಪ್ರಾಚಾರ್ಯ ವೀಣಾ ಕಾಮತ,ಕೆನರಾ ಕಾಲೇಜು ಸೋಸೈಟಿಯ ಕಾರ್ಯಾಧ್ಯಕ್ಷರಾದ ಡಿ.ಎಂ.ಕಾಮತ,ಕಾರ್ಯದರ್ಶಿ ಸುಧಾಕರ ನಾಯಕ ಅಭಿನಂದಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement