ಆರ್ಬಿಐನಿಂದ ಶೀಘ್ರ ಡಿಜಿಟಲ್ ಕರೆನ್ಸಿ ಬಿಡುಗಡೆ: ಉಪಗವರ್ನರ್

ನವದೆಹಲಿ: ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿ ಮಾದರಿಯಲ್ಲಿ ನಮ್ಮದೇ ಆದ ಡಿಜಿಟಲ್ ಕರೆನ್ಸಿ ಜಾರಿಗೊಳಿಸುವ ನಿಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸುವುದಾಗಿ ಆರ್.ಬಿ.ಐ.ನ ಉಪ ಗವರ್ನರ್ ಟಿ.ರವಿಶಂಕರ್ ತಿಳಿಸಿದ್ದಾರೆ.

ವಿಶ್ವದ ಬಹುತೇಕ ದೇಶಗಳ ಕೇಂದ್ರೀಯ ಬ್ಯಾಂಕ್ ಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿ ಬಿಡುಗಡೆ ಪ್ರಕ್ರಿಯೆಯಲ್ಲಿವೆ. ಆರ್.ಬಿ.ಐ. ಸಹ ಅದೇ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ. ಹಂತ ಹಂತವಾಗಿ ಕ್ರಿಪ್ಟೋಕರೆನ್ಸಿ ಜಾರಿಗೊಳಿಸಲು ಮತ್ತು ಅದನ್ನು ಭವಿಷ್ಯದಲ್ಲಿ ಚಿಲ್ಲರೆ ಮತ್ತು ಸಗಟು ವ್ಯಾಪಾರ ಕ್ಷೇತ್ರದಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ಹೋಲಿಸಿದರೆ ಕೇಂದ್ರೀಯ ಬ್ಯಾಂಕ್ ಗಳು ಬಿಡುಗಡೆ ಮಾಡುವ ಡಿಜಿಟಲ್ ಕರೆನ್ಸಿ, ಅಸಹಜ ಏರಿಳಿಕೆಯಿಂದ ರಕ್ಷಣೆ ನೀಡುತ್ತದೆ. ಡಿಜಿಟಲ್ ಕರೆನ್ಸಿ ಬಳಕೆಯು, ನೋಟುಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ, ನಿರ್ವವಣಾ ವೆಚ್ಚ, ಮುದ್ರಣಾ ವೆಚ್ಚ ಉಳಿಸುತ್ತದೆ ಜೊತೆಗೆ ಸೆಟಲ್ಮೆಂಟ್ ಅಪಾಯವನ್ನೂ ಕಡಿಮೆ ಮಾಡುತ್ತದೆ ಎಂದು ರವಿಶಂಕರ್ ಹೇಳಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement