ಜಮ್ಮು -ಕಾಶ್ಮೀರದಲ್ಲಿ ಪ್ರಮುಖ ಪಿತೂರಿ ವಿಫಲ: ಅಖ್ನೂರಿನಲ್ಲಿ ಡ್ರೋನ್‌ ಹೊಡೆದುರುಳಿಸಿದ ಸೇನೆ: 5 ಕೆಜಿ ಸ್ಫೋಟಕ ವಶ

ನವದೆಹಲಿ: ಜಮ್ಮು ಜಿಲ್ಲೆಯ ಅಖ್ನೂರ್ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೆಕ್ಸಾಕೋಪ್ಟರ್ ಡ್ರೋನ್ ಅನ್ನು ಶುಕ್ರವಾರ ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಡ್ರೋನ್ ಅನ್ನು ಅಂತರರಾಷ್ಟ್ರೀಯ ಗಡಿಯ (ಐಬಿ) 8 ಕಿ.ಮೀ.ಒಳಗೆ ಪತ್ತೆ ಹಚ್ಚಿ ಹೊಡೆದುರುಳಿಸಲಾಯಿತು.
ಭಯೋತ್ಪಾದಕರು ಬಳಸಬೇಕಾಗಿದ್ದ 5 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡ್ರೋನ್ ಚಟುವಟಿಕೆಯ ಹಿಂದೆ ಭಯೋತ್ಪಾದಕ ಸಜ್ಜು ಲಷ್ಕರ್-ಎ-ತೈಬಾ (ಎಲ್‌ಇಟಿ) ಇದೆಯೇ ಮತ್ತು ಹಿಂದಿನ ಪ್ರಕರಣಗಳಂತೆ ಭಯೋತ್ಪಾದಕ ದಾಳಿಗೆ ಈ ಮೋಡಸ್ ಒಪೆರಾಂಡಿಯನ್ನು ಬಳಸುತ್ತಿದೆಯೇ ಎಂಬುದುರ ಕುರಿತು ಏಜೆನ್ಸಿಗಳು ತನಿಖೆ ನಡೆಸುತ್ತಿವೆ.
ಜಮ್ಮು ಅಥವಾ ಅಂತರರಾಷ್ಟ್ರೀಯ ಗಡಿಗಳ ಬಳಿ ಡ್ರೋನ್ ಪತ್ತೆಯಾಗುವುದು ಇದೇ ಮೊದಲಲ್ಲ. ಜೂನ್ 27 ರಂದು ಜಮ್ಮು ವಾಯುನೆಲೆಯಲ್ಲಿ ನಡೆದ ಅವಳಿ ಸ್ಫೋಟಗಳ ನಂತರ, ಕಳೆದ ಒಂದು ತಿಂಗಳಲ್ಲಿ ಹಲವಾರು ಡ್ರೋನ್‌ಗಳನ್ನು ಜಮ್ಮುವಿನ ಅನೇಕ ಸ್ಥಳಗಳಲ್ಲಿ ಪತ್ತೆ ಮಾಡಲಾಗಿದ್ದು, ಡ್ರೋನ್ ದಾಳಿಯ ಬೆದರಿಕೆಯನ್ನು ಹೆಚ್ಚಿಸಿದೆ.
ಉಲ್ಬಣಗೊಂಡ ಡ್ರೋನ್ ಚಟುವಟಿಕೆಯ ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಇತ್ತೀಚೆಗೆ ಭಯೋತ್ಪಾದಕ ಸಂಘಟನೆಗಳು ನಿರಂತರವಾಗಿ ಡ್ರೋನ್‌ಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲು ಪ್ರಯತ್ನಿಸುತ್ತಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಭಯೋತ್ಪಾದಕ ಸಂಘಟನೆಗಳು ನಿರಂತರವಾಗಿ ಡ್ರೋನ್‌ಗಳನ್ನು ಬಳಸಲು ಪ್ರಯತ್ನಿಸುತ್ತಿವೆ.ಅವರ ಪ್ರಯತ್ನಗಳನ್ನು ವಿಫಲಗೊಳಿಸಲು ಎಲ್ಲ ಅನುಮಾನಾಸ್ಪದ ಅಂಶಗಳನ್ನು ಪರಿಶೀಲಿಸಬೇಕು ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದರು.

ಪ್ರಮುಖ ಸುದ್ದಿ :-   ಒಳ್ಳೆಯ ಸುದ್ದಿ...| ಈ ವರ್ಷ ವಾಡಿಕೆಗಿಂತ ಮೊದಲೇ ಆಗಮಿಸಲಿದೆ ಮುಂಗಾರು ಮಳೆ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement