ಇಂದಿನಿಂದ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಸ್ವಾಮೀಜಿ ಚಾತುರ್ಮಾಸ್ಯ

ಬೆಂಗಳೂರು:ಇಲ್ಲಿನ ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರೆ ಕೂಡ್ಲಿ ಶೃಂಗೇರಿ ಮಠದ ನೂತನ ಪೀಠಾಧಿಪತಿಗಳಾದ ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಶ್ರೀಗಳ ಚಾತುರ್ಮಾಸ್ಯ ಬೆಂಗಳೂರಿನ ಶ್ರೀಮಠದಲ್ಲಿಯೇ ನಡೆಯಲಿದೆ. ಆಷಾಢ ಮಾಸದ ಹುಣ್ಣಿಮೆಯ ದಿನವಾದ ನಾಳೆ (ಜುಲೈ 24) ವ್ಯಾಸ ಪೂಜೆಯೊಂದಿಗೆ ನೂತನ ಶ್ರೀಗಳು ಚಾತುರ್ಮಾಸ್ಯ ವ್ರತ ಆರಂಭಿಸಲಿದ್ದಾರೆ. ಭಾದ್ರಪದ ಮಾಸದ ಸೆಪ್ಟಂಬರ್ 20ರ ಅನಂತನ ಹುಣ್ಣಿಮೆ ದಿನದಂದು ಜಗದ್ಗುರುಗಳು ಸೀಮೊಲ್ಲಂಘನ ಮಾಡುವ ಮೂಲಕ ಚಾತುರ್ಮಾಸ್ಯ ವ್ರತ ಮುಕ್ತಾಯಗೊಳಿಸಲಿದ್ದಾರೆ.
ಚಾತುರ್ಮಾಸ್ಯದ ವ್ರತಾಚರಣೆ ಸಂದರ್ಭದಲ್ಲಿ ಜಗದ್ಗುರುಗಳು ವಿವಿಧ ಧಾರ್ಮಿಕ, ಅನುಷ್ಠಾನ, ಪ್ರವಚನಾದಿ ಕೈಂಕರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಸ್ವಾಮೀಜಿ ಚಾಮರಾಜ ಪೇಟೆಯ ಶ್ರೀಮಠದಲ್ಲಿಯೇ ಇರಲಿದ್ದಾರೆ. ಜುಲೈ 24ರಿಂದ ಆರಂಭಗೊಳ್ಳುವ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಏರ್ಪಡಿಸಲಾಗಿದ್ದು ಭಕ್ತಾದಿಗಳು ಪಾಲ್ಗೊಳ್ಳುವಂತೆ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement