ಮಳೆ ಅಬ್ಬರ: ಬಸವಸಾಗರದಿಂದ 3 ಲಕ್ಷ ಕ್ಯೂಸೆಕ್‌ ನೀರು ಬಿಡುವ ಸಾಧ್ಯತೆ..!

ಯಾದಗಿರಿ: ಕೃಷ್ಣಾ ನದಿಗೆ ಪ್ರಸಕ್ತ 2.30 ಲಕ್ಷ ಕ್ಯೂಸೆಕ ನೀರು ಬಿಡಲಾಗಿದ್ದು, ಇನ್ನೂ ಕೆಲವು ಗಂಟೆಗಳಲ್ಲಿ 3 ಲಕ್ಷ ಕ್ಯೂಸೆಕ್‌  ನೀರು ಬಿಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರು ತಿಳಿಸಿದ್ದಾರೆ.
ಪ್ರಸ್ತುತ ಕೃಷ್ಣಾ ನದಿಯಿಂದ 2,30,680 ಕ್ಯೂಸೆಕ್‌ ಹಾಗೂ ಭೀಮಾ ನದಿಯಿಂದ 13,500 ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ.
ಶುಕ್ರವಾರ ನಾರಾಯಣಪುರ ಜಲಾಶಯದಿಂದ 3,00,000 ಕ್ಯೂಸೆಕ್‌  ನೀರು ಹರಿದು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ನೀರು ಹರಿದು ಬಂದರೆ ಶಹಾಪುರ ತಾಲುಕಿನ ಕೊಳ್ಳೂರು (ಎಂ) ಸೇತುವೆಯು ಮುಳುಗಡೆಯಾಗಲಿದೆ ಮತ್ತು. ಸೇತುವೆ ರಸ್ತೆ ಸಂಪರ್ಕವು ಕಡಿತಗೊಳ್ಳುವ ಸಾಧ್ಯತೆ ಇದೆ. ಈ ಸೇತುವೆ ನಿಗಾವಹಿಸಲು ಪೊಲೀಸ ಸಿಬ್ಬಂದಿ ನಿಯೋಜಿಸಿ ಮುಂಜಾಗ್ರತಾಕ್ರಮ ಕೈಗೊಳ್ಳಲಾಗಿದೆ.ಈ ಸೇತುವೆಯ ವಾಹನ ಸಾಗಾಟ ಮತ್ತು ಪ್ರಯಾಣ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಆದೇಶವನ್ನು ಪಾಲಿಸಲು ಕೋರಲಾಗಿದೆ.
ಯಾವುದೇ ತುರ್ತು ಸಂದರ್ಭದಲ್ಲಿ ನದಿ ಪಾತ್ರ ಮತ್ತು ಹಳ್ಳಗಳ ಕಡೆಗೆ ಜನ -ಜಾನುವಾರುಗಳು ನದಿ ತೀರಕ್ಕೆ ಹೋಗದಂತೆ ಎಚ್ಚರವಹಿಸಬೇಕೆಂದು ಈಗಾಗಲೇ ಮುಂಜಾಗ್ರತ ಕ್ರಮವಾಗಿ ಗ್ರಾಮ ಪಂಚಾಯತ ಮೂಲಕ ಎಲ್ಲಾ ಹಳ್ಳಿಗಳಿಗೆ ಡಂಗುರ ಸಾರಲಾಗಿದೆ.
ನದಿ ತೀರದಲ್ಲಿ ಬರುವ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ಮುಂಜಾಗ್ರತಾ ಕ್ರಮವಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಗೆ ಅನುಸಾರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ದೇಶನ ನೀಡಲಾಗಿದೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು ಜನರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ಸಹಾಯವಾಣಿ 08473-253800 ಸಂಖ್ಯೆಗೆ ಕರೆ ಮಾಡಲು ಜಿಲ್ಲಾಧಿಕಾರಿ ಅವರು ಕೋರಿದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement