ಹುಬ್ಬಳ್ಳಿ: ಇಲ್ಲಿನ ನವನಗರದಿಂದ ಯಲ್ಲಾಪುರ ತಾಲೀಕಿನ ಶಿರ್ಲೆ ಜಲಪಾತಕ್ಕೆ ಬಂದಿದ್ದ ಆರು ಯುವಕರು ಕೊನೆಗೂ ಪತ್ತೆಯಾಗಿದ್ದಾರೆ.
ನಿನ್ನೆಯಿಂದ ಅವರ ಹುಡುಕಾಟ ನಡೆಸಲಾಗಿತ್ತು.ಅಂಕೋಲಾ -ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತಕ್ಕೆ ಇವರು ಪ್ರವಾಸಕ್ಕೆ ಬಂದಿದ್ದರು. ಗುರುವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು ಅವರು ವಾಪಸ್ ಬಂದಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಇವರ ಹುಡುಕಾಟ ನಡೆಸಿದ್ದರು. ಅದೃಷ್ಟವಶಾತ್ ಯುವಕರು ಯಲ್ಲಾಪುರ ಶಿರ್ಲೆ ಫಾಲ್ಸ್ ಸುತ್ತಲ ಕಾಡಿನಲ್ಲಿ ಪತ್ತೆಯಾಗಿದ್ದು, ಸುರಕ್ಷಿತವಾಗಿ ಯಲ್ಲಾಪುರ ಪೊಲೀಸ್ ಠಾಣೆಗೆ ಕರೆತರಲಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಆರು ಯುವಕರು ಪತ್ತೆಯಾಗಿದ್ದಾರೆ. ಕಾಡಿನಲ್ಲಿ ಅಲೆಯುತ್ತಿದ್ದ ಸಮಯದಲ್ಲಿ ಕಾಡಿನಲ್ಲಿ ಅಲೆಯುತ್ತಿದ್ದಾಗ ಕಂಡಿದ್ದಾರೆ.
ನವನಗರದಿಂದ ಹೋಗಿದ್ದ ಆಸೀಫ್ ಮಕಬುಲಸಾಬ್ ಡಾಲಾಯಿತ್, ಅಹ್ಮದ್ ಸೈಯ್ಯದ್ ಶೇಕ್, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬುಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ ನೀರಸಾಬ್ ಮುಲ್ಲಾನವರ ಎಂಬವರು ಕಾಡಿನಲ್ಲಿ ಪತ್ತೆಯಾಗಿದ್ದಾರೆ.
ಯಲ್ಲಾಪುರ ಸಮೀಪದ ಶಿರ್ಲೆ ಪಾಲ್ಸ್ ಬಳಿಯಲ್ಲಿ ಇವರ ಮೂರು ಸ್ಕೂಟಿಗಳು ಸಿಕ್ಕಿದ್ದು, ಯುವಕರು ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ಆತಂಕಗೊಂಡಿದ್ದರು.
ಅಂಕೋಲಾ -ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತಕ್ಕೆ ಇವರು ಪ್ರವಾಸಕ್ಕೆ ಬಂದಿದ್ದರು. ಗುರುವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು ಅವರು ವಾಪಸ್ ಬಂದಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಇವರ ಹುಡುಕಾಟ ನಡೆಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ