ಒಲಿಂಪಿಕ್‌ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ತರಬೇತುದಾರ ವಿಜಯ್ ಶರ್ಮಾಗೆ 10 ಲಕ್ಷ ರೂ ಬಹುಮಾನ ಘೋಷಿಸಿದ ಐಒಎ

ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಶನಿವಾರ ಒಲಿಂಪಿಕ್ ಪದಕ ವಿಜೇತರ ತರಬೇತುದಾರರಿಗೆ ನಗದು ಬಹುಮಾನವನ್ನು ಘೋಷಿಸಿದೆ.
ಟೋಕಿಯೋ ಒಲಂಪಿಕ್​ ಕ್ರೀಡಾಕೂಟದಲ್ಲಿ ಬೆಳ್ಳಿ ವಿಜೇತ ಮೀರಾಬಾಯಿ ಚಾನು ಅವರ ಐತಿಹಾಸಿಕ ಸಾಧನೆಯ ನಂತರ ತರಬೇತುದಾರ ವಿಜಯ್ ಶರ್ಮಾ ಅವರಿಗೆ 10 ಲಕ್ಷ ರೂ ನಗದು ಬಹುಮಾನವನ್ನು ಘೋಷಿಸಲಾಗಿದೆ. ಒಲಂಪಿಕ್​ ಕ್ರೀಡಾಕೂಟದಲ್ಲಿ ಸ್ಪರ್ದಿಯು ಚಿನ್ನದ ಪದಕ ಗೆದ್ದರೆ ಅವರ ತರಬೇತುದಾರರಿಗೆ 12.5 ಲಕ್ಷ , ಕಂಚಿನ ಪದಕ ವಿಜೇತರಿಗೆ 7.5 ಲಕ್ಷ ರೂ ನೀಡಲಾಗುತ್ತದೆ ಎಂದು ಭಾರತೀಯ ಒಲಂಪಿಕ್​ ಸಂಸ್ಥೆ ತಿಳಿಸಿದೆ.
ಒಲಿಂಪಿಕ್ ಪದಕ ವಿಜೇತರನ್ನು ಸಿದ್ಧಗೊಳಿಸುವ ತರಬೇತುದಾರರಿಗೆ ಬಹುಮಾನ ನೀಡಬೇಕಾಗಿರುವುದು ಜವಾಬ್ದಾರಿ. ಕ್ರೀಡಾಪಟುಗಳಿಗೆ ದಿನ ಮಾರ್ಗದರ್ಶನ ನೀಡುವವರು ಅವರೇ. ಕ್ರೀಡಾಪಟುಗಳಂತೆಯೇ ಅವರು ಸಹ ಶ್ರಮಿಸುತ್ತಿದ್ದಾರೆ ಮತ್ತು ತ್ಯಾಗ ಮಾಡುತ್ತಿದ್ದಾರೆ”ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಿಗೆ ತಲಾ 75 ಲಕ್ಷ ರೂ.ಗಳ ನಗದು ಪ್ರಶಸ್ತಿಯನ್ನು ನೀಡುವುದಾಗಿ ಐಒಎ ಗುರುವಾರ ಘೋಷಿಸಿತ್ತು, ಬೆಳ್ಳಿ ಪದಕ ವಿಜೇತರಿಗೆ 40 ಲಕ್ಷ ರೂ., ಕಂಚಿನ ವಿಜೇತರಿಗೆ 25 ಲಕ್ಷ ರೂ, ಹಾಗೂ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ದೇಶ ಪ್ರತಿನಿಧಿಸುವ ಪ್ರತಿ ಕ್ರೀಡಾಪಟುವಿಗೆ 1 ಲಕ್ಷ ನೀಡಲಾಗುವುದು ಎಂದು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಹೇಳಿದೆ.
ಟೊಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತ ಶುಭಾರಂಭ ಮಾಡಿತ್ತು. 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಇದರೊಂದಿಗೆ ಭಾರತದ ಪದಕ ಬೇಟೆ ಶುರುವಾಗಿತ್ತು. ಇವರು ಪದಕ ಗೆಲ್ಲುತ್ತಿದ್ದಂತೆ ಒಲಂಪಿಕ್​ ಕ್ರೀಡಾ ಪ್ರಾಧಿಕಾರ ಸೇರಿದಂತೆ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಪೈಪೋಟಿಗೆ ಬಿದ್ದಂತೆ ಕ್ರೀಡಾಪಟುಗಳಿಗೆ ಪ್ರಶಸ್ತಿ ಘೋಷಣೆ ಮಾಡಿದೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement