ಮಹಾರಾಷ್ಟ್ರ ಪ್ರವಾಹ: ವಿದ್ಯುತ್ ಕಡಿತದಿಂದ ಆಮ್ಲಜನಕ ಪೂರೈಕೆ ಸ್ಥಗಿತಗೊಂಡು ಎಂಟು ಕೊರೊನಾ ರೋಗಿಗಳು ಸಾವು

ಮುಂಬೈ: ಅಭೂತಪೂರ್ವ ಮಳೆಯು  ಮಹಾರಾಷ್ಟ್ರದಾದ್ಯಂತ ಹಾನಿಯನ್ನುಂಟು ಮಾಡಿದೆ. ಪ್ರವಾಹ ಪೀಡಿತ ರತ್ನಗಿರಿ ಜಿಲ್ಲೆಯ ಖೇಡ್ ತಹಸೀಲ್‌ನ  ಖಾಸಗಿ ಆಸ್ಪತ್ರೆಯಲ್ಲಿ ಎಂಟು ಕೋವಿಡ್‌ -19 ರೋಗಿಗಳು ಪ್ರವಾಹದಿಂದಾಗಿ ವಿದ್ಯುತ್ ಅಡೆತಡೆಯಿಂದಾಗಿ ಆಮ್ಲಜನಕದ ಪೂರೈಕೆಯ ಕೊರತೆಯಿಂದ ಮೃತಪಟ್ಟರು.

ಈ ದುರದೃಷ್ಟಕರ ಘಟನೆಯ ಬಗ್ಗೆ ರತ್ನಗಿರಿ ಜಿಲ್ಲೆಯ ಸ್ಥಳೀಯ ಆಡಳಿತ ತನಿಖೆ ಆರಂಭಿಸಿದೆ.

ಜಿಲ್ಲಾಧಿಕಾರಿ ಬಿ. ಎನ್. ಪಾಟೀಲ್ ಅವರ ಪ್ರಕಾರ, ನಾಲ್ಕು ಜನರು ವೆಂಟಿಲೇಟರ್‌ನಲ್ಲಿದ್ದರು. ಮತ್ತೆ  ನಾಲ್ವರು ಆಘಾತದಿಂದಾಗಿ ಮೃತಪಟ್ಟಿದ್ದಾರೆ.  ಆಸ್ಪತ್ರೆಯಲ್ಲಿ 22 ರೋಗಿಗಳಿದ್ದು, ಘಟನೆಯ ನಂತರ ಇತರರನ್ನು ಸ್ಥಳಾಂತರಿಸಲಾಗಿದೆ. ಕೊಂಕಣ ವಿಭಾಗೀಯ ಆಯುಕ್ತ ವಿ ಬಿ ಪಾಟೀಲ್ ಅವರು ಆಸ್ಪತ್ರೆಯಿಂದ ಯಾವುದೇ ತೊಂದರೆಯ ಕರೆ ಬಂದಿಲ್ಲ ಎಂದು ಹೇಳಿದರು.

ಆಸ್ಪತ್ರೆಯು ಗುರುವಾರದಿಂದ ನೀರಿನಲ್ಲಿ ಮುಳುಗಿತ್ತು. ಶುಕ್ರವಾರ ಬೆಳಿಗ್ಗೆ 7 ಗಂಟೆಯ ನಂತರ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು.

ಕಳೆದ ರಾತ್ರಿ ನಮಗೆ ಕರೆ ಬಂದ ನಂತರ, ರೋಗಿಗಳನ್ನು ಸ್ಥಳಾಂತರಿಸಲು ಪಾರುಗಾಣಿಕಾ ತಂಡವನ್ನು ನಿಯೋಜಿಸಲಾಗಿತ್ತು, ಆದರೆ ನೀರು ತುಂಬಿದ ಕಾರಣ ಅವರಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ.  ಎಂದು ಜಿಲ್ಲಾ  ಶಸ್ತ್ರಚಿಕಿತ್ಸಕ. ಡಾ. ಸಂಘಿಮಿತ್ರ ಫುಲೆ ಹೇಳಿದರು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಏತನ್ಮಧ್ಯೆ, ಜಿಲ್ಲಾಧಿಕಾರಿ  ದತ್ತ ಭಡಕ್ವಾಡ್ ಅವರು ಆಮ್ಲಜನಕದ ಕೊರತೆಯಿಲ್ಲ, ಆದರೆ ವಿದ್ಯುತ್ ಕಡಿತದಿಂದಾಗಿ ಅದನ್ನು ಪೂರೈಸಲು ಸಾಧ್ಯವಾಗಲಿಲ್ಲ.ಆಡಳಿತವು ತಾತ್ಕಾಲಿಕವಾಗಿ ಆಮ್ಲಜನಕವನ್ನು ಪೂರೈಸಲು ಪ್ರಯತ್ನಿಸಿತು ಆದರೆ ಸುರಿಯುವ ಮಳೆಯಿಂದಾಗಿ ಅದು ವಿಫಲವಾಯಿತು  ಎಂದು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement