ಮಹಾರಾಷ್ಟ್ರದಲ್ಲಿ ಮಳೆ ಕೋಪ: 149 ಮಂದಿ ಸಾವು, 60 ಮಂದಿ ನಾಪತ್ತೆ, 50ಗೆ ಮಂದಿ ಗಾಯ

ಮುಂಬೈ; ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ ಅನೇಕ ಕಡೆ ಭೂಕುಸಿತ ಮತ್ತು ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 149 ಜನರು ಮೃತಪಟ್ಟಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಭಾನುವಾರ ಸಂಜೆ ಅಧಿಸೂಚನೆಯಲ್ಲಿ ತಿಳಿಸಿದೆ. 64 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ಅದು ಹೇಳಿದೆ.
ರಾಯಗಡ್‌ನಲ್ಲಿ 60, ರತ್ನಾಗಿರಿಯಲ್ಲಿ 2, ಕೊಲ್ಹಾಪುರದಲ್ಲಿ 7, ಸತಾರಾದಲ್ಲಿ 41, ಸಿಂಧುದುರ್ಗ್‌ನಲ್ಲಿ 2, ಮುಂಬೈನಲ್ಲಿ 4, ಪುಣೆಯಲ್ಲಿ 2 ಮತ್ತು ಥಾಣೆಯಲ್ಲಿ 12 ಜನರು ಮೃತಪಟ್ಟಿದ್ದಾರೆ ಎಂದು ಅಧಿಸೂಚನೆ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 2,29,074 ಜನರನ್ನು ಸ್ಥಳಾಂತರಿಸಲಾಗಿದೆ. ರತ್ನಾಗಿರಿಯಲ್ಲಿ 1200, ರಾಯಗಡ್‌ನಲ್ಲಿ 1000, ಕೊಲ್ಹಾಪುರದಲ್ಲಿ 40882, ಸತಾರಾದಲ್ಲಿ 7530, ಸಿಂಧುದುರ್ಗ್‌ನಲ್ಲಿ 1271, ಪುಣೆಯಲ್ಲಿ 263 ಮತ್ತು ಥಾಣೆಯಲ್ಲಿ 6930 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅದು ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆ ನಡೆಸಲು ರಾಜ್ಯಾದ್ಯಂತ ಒಟ್ಟು 25 ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ) ತಂಡಗಳು, 4 ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ), 2 ಕರಾವಳಿ ಕಾವಲು ಪಡೆ, 5 ಭಾರತೀಯ ನೌಕಾಪಡೆ, ಮತ್ತು 3 ಸೇನೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement