ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಿರಸಿ ಐಎಂಎಯಿಂದ ವೈದ್ಯಕೀಯ ತಪಾಸಣೆ, ಔಷಧ ವಿತರಣೆ

ಶಿರಸಿ: ಸೋಂದಾ ಸ್ವರ್ಣವಲ್ಲಿ ಮ‌ಹಾಸಂಸ್ಥಾನದ ಶ್ರೀಮಜ್ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಅಪೇಕ್ಷೆಯಂತೆ ಭಾರತಿಯ ವೈದ್ಯಕೀಯ ಸಂಘ (ಐಎಂಎ) ಶಿರಸಿ ಶಾಖೆಯ ಸದಸ್ಯರು ಯಲ್ಲಾಪುರ ತಾಲೂಕಿನ ಪ್ರವಾಹ ಪೀಡಿತ ವಿವಿಧ ಕಡೆ ವೈದ್ಯಕೀಯ ಶಿಬಿರ ನಡೆಸಿದರು.
ಪ್ರವಾಹ ಪೀಡಿತ ಪ್ರದೇಶಗಳಾದ ತಳಕೆಬೇಲ,ಹೆಬ್ಬಾರಕುಂಬ್ರಿ, ಇರಾಪುರ, ಹೊಸಕುಂಬ್ರಿ, ಬಳೆಕಲಗದ್ದೆ ಮೊದಲಾದ ರಸ್ತೆ ಸಂಪರ್ಕ ಇಲ್ಲದ ಮಳೆಯಿಂದ ಗುಡ್ಡಕುಸಿತತವಾಗಿರುವ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಸಾರ್ವಜನಿಕರಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು ಹಾಗೂ ಅಗತ್ಯ ಉಪಚಾರ ಮಾಡಿ ಅವಶ್ಯಕ ಔಷಧ ವಿತರಿಸಲಾಯಿತು.
ಇನ್ನೂಂದು ತಂಡ ಮತ್ತಿಘಟ್ಟ ಮೂಲಕ ವೈದ್ಯ ಹೆಗ್ಗಾರ, ಕಲ್ಲೇಶ್ವರ ಭಾಗಗಳಲ್ಲಿ ಪ್ರವಾಹ ಪೀಡಿತ ಸ್ಥಳದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅವಶ್ಯಕ ಔಷಧ ವಿತರಿಸಿತು.
ಸೋಂದಾ ಸ್ವರ್ಣವಲ್ಲಿ ಮ‌ಹಾಸಂಸ್ಥಾನದ ಸ್ವಯಂ ಸೇವಕರು ಅವಶ್ಯಕ ಸಹಕಾರ ನೀಡಿದರು.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement