ಮುಳುಗಡೆಯಾದ ವಿಶ್ವವಿಖ್ಯಾತ ಹಂಪಿ ಸ್ಮಾರಕಗಳು

ಹೊಸಪೇಟೆ : ಇಲ್ಲಿನ‌ ತುಂಗಭದ್ರಾ ಜಲಾಶಯದಿಂದ ಭಾನುವಾರ ಹೆಚ್ಚುವರಿ ನೀರನ್ನು‌ ನದಿಗೆ ಹರಿಸಿದ‌ ಪರಿಣಾಮ ವಿಶ್ವವಿಖ್ಯಾತ ಹಂಪಿಯ ಅನೇಕ ಐತಿಹಾಸಿಕ ಸ್ಮಾರಕಗಳು ಮುಳುಗಡೆಯಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇದ್ದು, ಮುಂಜಾಗ್ರತಾ ಕ್ರಮವಾಗಿ ತುಂಗಭದ್ರಾ ಜಲಾಶಯದ 12 ಕ್ರಸ್ಟ್ ಗೇಟ್​​ಗಳ ಮೂಲಕ ಸದ್ಯ 36,217 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ.
ತುಂಗಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯತ್ತಿದೆ.ಜಲಾಶಯದಿಂದ ಬೆಳಗ್ಗೆ ‌ಹೆಚ್ಚುವರಿ‌ ನೀರನ್ನು‌ ನದಿಗೆ ಹರಿಬಿಡುತ್ತಿದಂತೇ, ಇತ್ತ ಹಂಪಿ ಸ್ಮಾರಕಗಳು ಮುಳುಗಡೆಯಾಗಿದೆ..
ತುಂಗಭದ್ರಾ ನದಿ ತಟದಲ್ಲಿರುವ ವೈದಿಕ ಮಂಟಪ, ಸ್ನಾನಘಟ್ಟ, ಕೋಟಿಲಿಂಗ, ಪುರಂದರದಾಸರ ‌ಮಂಟಪ‌ಗಳು ಮುಳಗಡೆಯಾಗಿವೆ. ಚಕ್ರತೀರ್ಥ ಕೋದಂಡರಾಮ ಸ್ವಾಮಿ ದೇಗುಲದ ಹತ್ತಿರಕ್ಕೆ ನೀರು ಬಂದಿದೆ. ಪ್ರವಾಸಿಗರು ನದಿ‌ ನೀರಿಗೆ ಇಳಿಯದಂತೆ ಎಚ್ಚರಿಕೆ‌ ನೀಡಲಾಗಿದೆ. ಬೋಟ್ ಸಂಚಾರ ಸಹ ನಿಷೇಧಿಸಲಾಗಿದೆ. ಶಿವಮೊಗ್ಗ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ನೀರಿನ ಒಳಹರಿವು ಹೆಚ್ಚಾದರೆ ಮತ್ತಷ್ಟು ನೀರು ಬಿಡುವ ಸಾಧ್ಯತೆ ಇದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement