ಮತ್ತೊಂದು ಸಂಶೋಧನೆ: ಕೋಳಿ ತ್ಯಾಜ್ಯದಿಂದ ಬಯೋಡಿಸೇಲ್, ಲೀಟರ್ ಗೆ 38 ಕಿಮೀ ಮೈಲೇಜ್‌..!

ವಯನಾಡ್: ಕೋಳಿ ತ್ಯಾಜ್ಯದಿಂದ ಪೆಟ್ರೋಲ್ ಉತ್ಪಾದಿಸಿ 38 ಕಿಲೋಮೀಟರ್ ಮೈಲೇಜ್‌ ಪಡೆದ ಸಂಶೋಧನೆಯೊಂದು ಬೆಳಕಿಗೆ ಬಂದಿದೆ.
ಕೇರಳದ ವಯನಾಡಿನ ಪಶುವೈದ್ಯರೊಬ್ಬರು ಕೋಳಿ ತ್ಯಾಜ್ಯ ಬಳಸಿ ಲೀಟರ್ ಗೆ 38 ಕಿಲೋಮೀಟರ್ ಮೈಲೇಜ್ ನೀಡುವ ಬಯೋ ಡಿಸೇಲ್ ಉತ್ಪಾದಿಸಿ ಗಮನ ಸೆಳೆದಿದ್ದಾರೆ.ಅದಕ್ಕೆ ಈಗ ಪೇಟೆಂಟ್‌ ಕೂಡ ಪಡೆದಿದ್ದಾರೆ.
ಕೇರಳದ ಪಶುವೈದ್ಯಕೀಯ ಮತ್ತು ಪಶು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾಗಿರುವ ಜಾನ್ ಅಬ್ರಹಾಂ ಈ ಸಂಶೋಧನೆಯಲ್ಲಿ ಯಶಕಂಡಿದ್ದು, 7 ವರ್ಷಗಳ ಸತತ ಪ್ರಯತ್ನದ ಬಳಿಕ ಈಗ ಈ ಬಯೋಡಿಸೇಲ್ ಗೆ ಪೆಟೇಂಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಯೋ ಡಿಸೇಲ್, ಪ್ರಸ್ತುತ ಬಳಕೆಯಲ್ಲಿರುವ ಡಿಸೇಲ್ ಗಿಂತಲೂ 40 ಶೇಕಡಾ ಅಗ್ಗವಾಗಿದ್ದು, ವಾಯುಮಾಲಿನ್ಯದ ಪ್ರಮಾಣ ಕೂಡ ಕಡಿಮೆ ಎಂದು ಜಾನ್ ಅಬ್ರಹಾಂ ಹೇಳುತ್ತಾರೆ.
2009 ರಿಂದ 12 ರ ಅವಧಿಯಲ್ಲಿ ಜಾನ್ ಅಬ್ರಹಾಂ ಬಾಯ್ಲರ್ ಕೋಳಿಯ ಮಾಂಸ ಹಾಗೂ ಸತ್ತ ಪಕ್ಷಿಗಳನ್ನು ಬಳಸಿ ಡಿಸೇಲ್ ಉತ್ಪಾದನೆ ನಡೆಸಿದ್ದರು. ಡಿಸೇಲ್ ಉತ್ಪಾದನೆಗೆ ಬಳಸಿದ ವಸ್ತುಗಳು ಸ್ಥಳೀಯ ಮಟ್ಟದ್ದಾಗಿದ್ದರಿಂದ ಇದಕ್ಕೆ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಿತ್ತು.
ಈ ಹಿನ್ನೆಲೆಯಲ್ಲಿ ಇಷ್ಟು ವರ್ಷಗಳ ಕಾಲ ಅನುಮತಿಗಾಗಿ ಕಾಯಲಾಗಿತ್ತು. ಜಾನ್ ಅಬ್ರಾಹಿಂ, 2014 ರಲ್ಲೇ 18 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬಯೋ ಡಿಸೇಲ್ ಉತ್ಪಾದನೆ ಪ್ರಾಯೋಗಿಕ ಘಟಕ ಆರಂಭಿಸಿದ್ದಾರೆ.
ಈ ಪ್ರಯತ್ನಕ್ಕೆ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ ಆರ್ಥಿಕ ನೆರವು ಪಡೆದಿದ್ದಾರೆ. 2015 ರಲ್ಲಿ ಕೇರಳ ಕೊಚ್ಚಿಯ ಭಾರತ್ ಪೆಟ್ರೋಲಿಯಂ ಸಂಸ್ಕರಣಾ ಘಟಕ ಈ ಬಯೋಡಿಸೇಲ್ ಗೆ ಗುಣಮಟ್ಟದ ಪ್ರಮಾಣ ಪತ್ರ ನೀಡಿದೆ.
ಈಗಾಗಲೇ ಕೇರಳ ವಿಶ್ವವಿದ್ಯಾಲಯದ ಬಸ್ ಗೆ ಇದೇ ಬಯೋ ಡಿಸೇಲ್ ಬಳಸಲಾಗುತ್ತಿದೆಯಂತೆ .ಪ್ರಾಣಿ,ಪಕ್ಷಿಗಳಲ್ಲಿ ಕೊಬ್ಬಿನಾಂಶ ಹೆಚ್ಚಿದ್ದು, ತೈಲ ತೆಗೆಯುವುದು ಸುಲಭ. ಹೀಗಾಗಿ ಡಿಸೇಲ್ ತಯಾರಿಕೆಗೆ ಸತ್ತ ಪ್ರಾಣಿ,ಪಕ್ಷಿಗಳು ಹಾಗೂ ಅವುಗಳ ತ್ಯಾಜ್ಯ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಜಾನ್ ಅಬ್ರಹಾಂ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ, ಕಸಬ್ ಹೊಗಳುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ": 26/11 ದಾಳಿ ಬಗ್ಗೆ ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಕಸಬ್ ವಿಚಾರಣೆ ಸಾಕ್ಷಿಯ ಆಕ್ಷೇಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement