ಧರ್ಮ ಪ್ರಚಾರಕ್ಕೆ ಐಎಂಎ ವೇದಿಕೆ ಬಳಕೆ: ಐಎಂಎ ಅಧ್ಯಕ್ಷರ ಅರ್ಜಿ ತಿರಸ್ಕರಿಸಿ ಎಚ್ಚರಿಕೆ ನೀಡಿದ ಹೈಕೋರ್ಟ್

ನವದೆಹಲಿ: ಯಾವುದೇ ಧರ್ಮದ ಪ್ರಚಾರಕ್ಕಾಗಿ ಭಾರತೀಯ ವೈದ್ಯಕೀಯ ಸಂಘದ (ಧರ್ಮ ಪ್ರಚಾರಕ್ಕೆ ಐಎಂಎ ವೇದಿಕೆ ಬಳಕೆ: ವೈದ್ಯಕೀಯ ಸಂಘದ ಅಧ್ಯಕ್ಷರ ಅರ್ಜಿ ತಿರಸ್ಕರಿಸಿ ಎ  ತಿರಸ್ಕರಿಸಿ ಎಚ್ಚರಿಕೆ ನೀಡಿದೆ.

ವೇದಿಕೆ ಬಳಸಿಕೊಳ್ಳಬಾರದೆಂಬ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಐಎಂಎ ಅಧ್ಯಕ್ಷ ಜೆ.ಎ.ಜಯಲಾಲ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.
ಅರ್ಜಿ ವಜಾಗೊಳಿಸಿ ಆದೇಶ ನೀಡುವ ಸಂದರ್ಭದಲ್ಲಿ ‘ಒಂದು ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಗಳಿಂದ ಇಂಥ ಅಸಂಬದ್ಧವಾದ ಹೇಳಿಕೆಗಳನ್ನು ನ್ಯಾಯಾಲಯ ನಿರೀಕ್ಷಿಸುವುದಿಲ್ಲ’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಜೂನ್ ತಿಂಗಳಲ್ಲಿ ನೀಡಿದ ಆದೇಶವನ್ನು ಪ್ರಶ್ನಿಸಿ ಐಎಎಂ ಅಧ್ಯಕ್ಷ ಜೆ.ಎ. ಜಯಲಾಲ್‌ ಸಲ್ಲಿಸಿದ್ದ ಮೇಲ್ಮನವಿ ಸಲ್ಲಿಸಿದ್ದರು.
ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವುದಕ್ಕಾಗಿ ಐಎಂಎ ಅಧ್ಯಕ್ಷ ಜಯಲಾಲ್ ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದೇಶ ಮತ್ತು ದೇಶದ ನಾಗರಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ರೋಹಿತ್ ಝಾ ಎಂಬವರು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.
ಜಯಲಾಲ್ ಅವರು ನೀಡಿದ ಸಂದರ್ಶನಗಳು ಹಾಗೂ ಬರೆದ ಲೇಖನಗಳು ಹಾಗೂ ಅವರು ಹಿಂದೂಧರ್ಮ ಅಥವಾ ಆಯುರ್ವೇದಕ್ಕೆ ಮಾನಹಾನಿ ಆಗುವಂತ ವಿಚಾರಗಳನ್ನು ಪ್ರಕಟಿಸದಂತೆ ಹಾಗೂ ಭಾಷಣ ಮಾಡದಂತೆ ತಡೆ ನೀಡುವಂತೆ ಕೋರಿ ನ್ಯಾಯಾಲಯದ ನಿರ್ದೇಶನ ಕೋರಿದ್ದನ್ನು ದೂರುದಾರರು ಲಗತ್ತಿಸಿದ್ದರು.
ಅಂತೆಯೇ ನ್ಯಾಯಾಲಯ ಭಾರತದ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧ ನಡೆದುಕೊಳ್ಳದಂತೆ ಹಾಗೂ ತಮ್ಮ ಹುದ್ದೆಯ ಜವಾಬ್ದಾರಿ, ಘನತೆಯನ್ನು ಕಾಪಾಡುವಂತೆ ಜಯಲಾಲ್ ಗೆ ಕೋರ್ಟ್ ನಿರ್ದೇಶನ ನೀಡಿತ್ತು. ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯದ ಆದೇಶದ ವಿರುದ್ಧ ಜಯಲಾಲ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement