ಬಿಜೆಪಿ ಸೋಲಿಸಲು ‘ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ’ ಪ್ರಾರಂಭ: ಟಿಕಾಯತ್‌

ಲಕ್ನೋ: ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಮುಖಂಡರಲ್ಲಿ ಓರ್ವರಾಗಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್‌ ಸೋಮವಾರ “2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ” ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.
ಲಕ್ನೋದಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಯುಕ್ತ ಕಿಸಾನ್‌ ಮೋರ್ಚಾ ಎಂಬುದು ರೈತ ಸಂಘಗಳ ಒಕ್ಕೂಟವಾಗಿದ್ದು, ಇದು ಕಳೆದ ವರ್ಷ ನವೆಂಬರ್‌ನಿಂದ ರೈತರ ಪ್ರತಿಭಟನೆಗೆ ನಡೆಸುತ್ತಿದೆ. ಮೋರ್ಚಾ ಬ್ಯಾನರ್ ಅಡಿಯಲ್ಲಿ ಕಳೆದ ಎಂಟು ತಿಂಗಳುಗಳಿಂದ ಹಲವಾರು ರಾಜ್ಯಗಳ ರೈತರು ಉತ್ತರ ಪ್ರದೇಶ ಮತ್ತು ಹರಿಯಾಣದೊಂದಿಗಿನ ದೆಹಲಿಯ ಗಡಿಯಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
“ಮೂರು ಕೃಷಿ ಕಾನೂನುಗಳಲ್ಲಿ ರೈತ ವಿರೋಧಿ ಏನೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಪ್ರಧಾನ ಮಂತ್ರಿಯ ದೊಡ್ಡ ಸುಳ್ಳು,” ಎಂದು ವಾಗ್ದಾಳಿ ನಡೆಸಿದರು.
ಮೂರು ಕಾನೂನುಗಳಲ್ಲಿ ಒಂದು ರೈತರು ಗೊಬ್ಬರ, ಬೀಜಗಳು, ಕೀಟನಾಶಕಗಳು, ಉಪಕರಣಗಳು ಇತ್ಯಾದಿಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಂದ ಗುತ್ತಿಗೆ ಕೃಷಿಯಡಿಯಲ್ಲಿ ಖರೀದಿಸಬೇಕಾಗುತ್ತದೆ ಎಂದು ಹೇಳುತ್ತದೆ. ಇದರಿಂದಾಗಿ ರೈತರು ತಮ್ಮ ಆಸ್ತಿಗಳನ್ನು ಅಡಮಾನ ಇಟ್ಟ ನಂತರ ಸಾಲ ಪಡೆಯಬೇಕಾಗುತ್ತದೆ ಎಂದರು.
ನಾವು ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆ ಮತ್ತು ಈಗ ನಾವು ಬಿಜೆಪಿಯನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸೋಲಿಸಲಿದ್ದೇವೆ. ಏಕೆಂದರೆ ಈ ಬಿಜೆಪಿ ಸರ್ಕಾರ ರೈತ ವಿರೋಧಿ ಕಪ್ಪು ಕಾನೂನುಗಳನ್ನು ರದ್ದುಗೊಳಿಸಲು ಸಿದ್ಧವಾಗಿಲ್ಲ. ನಮ್ಮ ಮೊದಲ ಮಹಾಪಂಚಾಯತ್ ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ ಸೆಪ್ಟೆಂಬರ್ 5 ರಂದು ಮುಜಾಫರ್‌ನಗರದಲ್ಲಿ ನಡೆಯಲಿದೆ, ಎಂದು ರಾಕೇಶ್ ಟಿಕಾಯತ್‌ ಮಾಹಿತಿ ನೀಡಿದರು.
ನಾವು ಶೀಘ್ರದಲ್ಲೇ ಲಕ್ನೋಗೆ ಪ್ರವೇಶಿಸುವ ಎಲ್ಲಾ ಸ್ಥಳಗಳಲ್ಲಿ ಧರಣಿಯಲ್ಲಿ ಕುಳಿತುಕೊಳ್ಳಲಿದ್ದೇವೆ. ನಾವು ಅದನ್ನು ದೆಹಲಿಯ ಸುತ್ತಲೂ ಮಾಡುತ್ತಿದ್ದೇವೆ. ನಾವು ದಣಿದಿದ್ದೇವೆ ಮತ್ತು ದೆಹಲಿಯ ಗಡಿಯಲ್ಲಿ ನಮ್ಮ ಆಂದೋಲನವನ್ನು ಸ್ಥಗಿತಗೊಳಿಸುತ್ತೇವೆ ಎಂದು ಸರ್ಕಾರ ಭಾವಿಸುತ್ತದೆ. ಆದರೆ ನಾವು ನಮ್ಮ ಪ್ರತಿಭಟನಾ ನೆಲೆಯನ್ನು ವಿಸ್ತರಿಸುತ್ತಿದ್ದೇವೆ,” ಎಂದು ಟಿಕಾಯತ್‌ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ, “ಮೋರ್ಚಾದ ಏಕೈಕ ಉದ್ದೇಶವೆಂದರೆ ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕುವುದು. ಅದರಿಂದಾಗಿ ಹೊಸ ಸರ್ಕಾರವು ಮೋದಿ ಸರ್ಕಾರ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುತ್ತದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಅಮಿತ್ ಶಾ ವೀಡಿಯೊ ತಿರುಚಿದ ಆರೋಪ: ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಸಿಎಂಗೆ ಸಮನ್ಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement